ರಾಷ್ಟ್ರೀಯ

ಮಾಲಿನ್ಯ ತುಂಬಿದ್ದ 160 ಕಿ.ಮೀ ಉದ್ದದ ನದಿಯನ್ನು ಸ್ವಚ್ಛಗೊಳಿಸಿದ ಇಕೋ ಬಾಬಾ

Pinterest LinkedIn Tumblr

Balbir Singh Seechewal

ಪಂಜಾಬ್: ಮಾಲಿನ್ಯ ತುಂಬಿದ್ದ ಪಂಜಾಬ್‌ನ ಕಾಲೇ ಬೈನ್ ಎಂಬ ನದಿಯನ್ನು ಇಕೋ ಬಾಬಾ ಮತ್ತು ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ಕಾರ್ಖಾನೆಯ ತ್ಯಾಜ್ಯಗಳು ಸೇರಿದಂತೆ ಇಡೀ ಊರಿನ ಮಾಲಿನ್ಯವು ಈ ನದಿಗೆ ಸೇರಿ, ಅಲ್ಲಿನ ನೀರು ಉಪಯೋಗ ಶೂನ್ಯವಾಗಿತ್ತು.

2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ. 160 ಕಿಮೀ ಉದ್ದವಿರುವ ಈ ನದಿಯಿಂದ ಟನ್‌ಗಟ್ಟಲೆ ಮಾಲಿನ್ಯವನ್ನು ಬಾಬಾ ಮತ್ತು ಅವರ ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ವಿಶೇಷ ಎಂದರೆ ಸರ್ಕಾರವಾಗಲೀ, ಇನ್ನಿತರ ಯಾವುದೇ ಸಂಘ ಸಂಸ್ಥೆಗಳ ಸಹಾಯವಿಲ್ಲದೆ ಇವರು ನದಿಯಿಂದ ಹೂಳೆತ್ತುವ ಕಾರ್ಯವನ್ನು ಮಾಡಿದ್ದಾರೆ.

ಇದೀಗ ಕಾಲೇ ಬೈನ್ ನದಿಯಲ್ಲಿ ಶುದ್ದಜಲ ಹರಿಯುತ್ತಿದೆ. ಈ ನದಿಯನ್ನು ಉಪಯೋಗ ಯೋಗ್ಯವಾಗುವಂತೆ ಮಾಡಿದ ಬಾಬಾ ಮತ್ತು ಸಂಗಡಿಗರು ಈಗ ನದಿ ದಂಡೆಯನ್ನು ಸುಂದರವಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Write A Comment