ರಾಷ್ಟ್ರೀಯ

ಕೊಲ್ಲಂ ಅಗ್ನಿ ದುರಂತ: ಕೇರಳ ತಲುಪಿದ ಪ್ರಧಾನಿ ಮೋದಿ

Pinterest LinkedIn Tumblr

mm

ತಿರುವನಂತಪುರ: ಕೇರಳದ ಮೂಕಾಂಬಿಕ ದೇಗುಲದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇರಳ ತಲುಪಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿ ಪರಿಹಾರ ಘೋಷಣೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇರಳ ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಇದರಂತೆ ಇಂದು ಬೆಳಿಗ್ಗೆ ವಿಶೇಷ ವಾಯುಸೇನಾ ವಿಮಾನದ ಮೂಲಕ ಕೇರಳಗೆ ಪ್ರಯಾಣ ಬೆಳೆಸಿದ್ದರು. ಮೋದಿಯವರೊಂದಿಗೆ 15 ವೈದ್ಯರ ತಂಡ ಕೂಡ ಪ್ರಯಾಣ ಬೆಳೆಸಿತ್ತು.

ಇದೀಗ ಪ್ರಧಾನಿ ಮೋದಿಯವರು, ವೈದ್ಯರ ತಂಡ ಹಾಗೂ ಇನ್ನಿತರೆ ಅಧಿಕಾರಿಗಳು ಕೇರಳ ತಲುಪಿದ್ದು, ಮೋದಿಯವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Write A Comment