ಕನ್ನಡ ವಾರ್ತೆಗಳು

ಶಕ್ತಿನಗರ ಬಳಿ ಬೆಂಕಿ ಆಕಸ್ಮಿಕ : ಮರಗಿಡಗಳು ಬೆಂಕಿಗಾಹುತಿ

Pinterest LinkedIn Tumblr

Shaktinagara_Fire_1

ಮಂಗಳೂರು : ನಗರದ ಬಿಕರ್ಣಕಟ್ಟೆ ಸಮೀಪದ ಶಕ್ತಿನಗರ ರಸ್ತೆಯ ಬಳಿಯ ಖಾಲಿ ಸ್ಥಳವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸ್ಥಳದಲ್ಲಿದ್ದ ಮರಗಳು ಸುಟ್ಟು ಬೂದಿಯಾದ ಘಟನೆ ರವಿವಾರ ಸಂಭವಿಸಿದೆ.

ಬಿಕರ್ಣಕಟ್ಟೆಯಿಂದ ಶಕ್ತಿನಗರಕ್ಕೆ ಹೋಗುವ ಒಳ ರಸ್ತೆಯ ವ್ಯಾಸನಗರ ಸಮೀಪದ ರಸ್ತೆಯ ಬದಿಯಲ್ಲಿರುವ ಸುಮಾರು ೩ ಎಕ್ರೆ ಖಾಸಗಿ ಜಾಗಕ್ಕೆ ಬೆಂಕಿ ತಗುಲ್ದೆ. ಘಟನೆಯಿಂದ ಈ ಜಾಗದಲ್ಲಿದ್ದ ಹಲವಾರು ಮರಗಿಡಗಳು ಸುಟ್ಟುಹೋಗಿವೆ. ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲವಾಗಿದ್ದರೂ, ಅವರು ಬರುವಷ್ಟರಲ್ಲಿ ಹೆಚ್ಚಿನ ಪ್ರಮಾಣದ ಮರಗಿಡಗಳು ಬೆಂಕಿಗಾಹುತಿಯಾಗಿದೆ.

Shaktinagara_Fire_2 Shaktinagara_Fire_3 Shaktinagara_Fire_4 Shaktinagara_Fire_5 Shaktinagara_Fire_6 Shaktinagara_Fire_7 Shaktinagara_Fire_8 Shaktinagara_Fire_9

ಈ ಸ್ಥಳಕ್ಕೆ ಬೆಂಕಿ ಹೇಗೆ ಬಿತ್ತು, ಈ ಬೆಂಕಿ ಅನಾಹುತದಿಂದ ಎಷ್ಟು ನಷ್ಟವುಂಟಾಗಿದೆ ಮುಂತಾದ ಮಾಹಿತಿಗಳ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Write A Comment