ರಾಷ್ಟ್ರೀಯ

ಸೋಲಾರ್ ಹಗರಣದ ಮುಖ್ಯ ಆರೋಪಿ ಸರಿತಾ ಸೇರಿದಂತೆ 4 ಪತ್ರಕರ್ತರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೇರಳ ಸಿಎಂ ಉಮ್ಮನ್ ಚಾಂಡಿ

Pinterest LinkedIn Tumblr

Oommen-Chandy

ಕೊಚ್ಚಿ: ಸೋಲಾರ್ ಹಗರಣದ ಮುಖ್ಯ ಆರೋಪಿ ಸರಿತಾ ಎಸ್ ನಾಯರ್ ಮತ್ತು ಏಷ್ಯಾ ನೆಟ್ ಮತ್ತು ಕೈರಾಲಿ ಟಿವಿಯ ನಾಲ್ವರು ಪತ್ರಕರ್ತರ ವಿರುದ್ಧ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಎರ್ನಾಕುಲಂನಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

2013ರಲ್ಲಿ ಸರಿತಾ ಬರೆದ ಪತ್ರಗಳನ್ನು ಚಾನೆಲ್ ನಲ್ಲಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ನಾಲ್ವರ ಪತ್ರಕರ್ತರಾದ ಏಷ್ಯಾನೆಟ್ ಸಂಪಾದಕ ಎಂ ಜಿ ರಾಧಕೃಷ್ಣನ್, ಹಿರಿಯ ಸುದಿ ಸಂಪಾದಕ ವಿನು ವಿ ಜಾನ್, ಕೈರಾಲಿ ಟಿವಿಯ ಸುದ್ದಿ ಮುಖ್ಯಸ್ಥ ಮನೋಜ್ ಕೆ ವರ್ಮಾ ಮತ್ತು ಹಿರಿಯ ಸುದ್ದಿ ಸಂಪಾದಕ ಕೆ ರಾಜೇಂದ್ರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನು ಸರಿತಾ ನಾಯರ್ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಅಧಿಕೃತ ನಿವಾಸದಲ್ಲಿ ನಾನು ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಸರಿತಾ ಆರೋಪಿಸಿದ್ದಾರೆ. ನಾನು ಕುಟುಂಬದ ಜೊತೆ ಪೂರ್ಣ ಭದ್ರತೆಯೊಂದಿಗೆ ವಾಸವಾಗಿದ್ದು, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ಸರಿತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಸೋಲಾರ್ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅನೈತಿಕ ಸಂಬಂಧ ಇತ್ಯಾದಿಗಳನ್ನು ಪ್ರಸ್ತಾಪಿಸಿ ಸರಿತಾ ನಾಯರ್ ಜೈಲಿನಲ್ಲಿ ಬರೆದ ಪತ್ರ ಇತ್ತೀಚೆಗೆ ಬಹಿರಂಗಗೊಂಡಿತ್ತು. ಪತ್ರದಲ್ಲಿ ಮುಖ್ಯಮಂತ್ರಿ ಚಾಂಡಿ ಹಾಗೂ ಮಾಜಿ ಕೇಂದ್ರ ಸಚಿವರೋರ್ವರು ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸರಿತಾ ಪತ್ರದಲ್ಲಿ ಉಲ್ಲೇಖಿಸಿದ್ದರು. 25 ಪುಟಗಳನ್ನು ಒಳಗೊಂಡ ಸರಿತಾ ನಾಯರ್ ರ ಪತ್ರದಲ್ಲಿ ಸಿಎಂ ಚಾಂಡಿ ತನ್ನ ಅಧಿಕೃತ ನಿವಾಸದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಹಿರಂಗ ಪಡಿಸಲಾಗಿದೆ. ಅಷ್ಟೇ ಅಲ್ಲದೇ ಇನ್ನು ಹಲವು ಜಾಗಗಳಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಸರಿತಾ ಪತ್ರದಲ್ಲಿ ಬರೆದಿದ್ದರು.

Write A Comment