ರಾಷ್ಟ್ರೀಯ

6 ವರ್ಷದ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ: ಆಕ್ರೋಶಿತ ಪೋಷಕರಿಂದ ಇಡೀ ಶಾಲೆಗೆ ಬೆಂಕಿ

Pinterest LinkedIn Tumblr

12

ನಾಸಿಕ್: 6 ವರ್ಷದ ಪುಟ್ಟ ಬಾಲಕಿಗೆ ಶಾಲಾ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ಪೋಷಕರು ಇಡೀ ಶಾಲೆಗೆ ಬೆಂಕಿ ಇಟ್ಟ ಘಟನೆ ಮಾಲೆಗಾಂವ್ ನಲ್ಲಿ ನಡೆದಿದೆ.

ಮಾಲೆಗಾಂವ್ ನ ಮದರ್ ಆಯೇಶಾ ಪ್ರೈಮರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಬುಧವಾರ ಶಾಲೆಯ ಮಾಲಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಅಜಯ್ ಧಾಂಕೆ ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರವನ್ನು ಬಾಲಕಿ ತನ್ನ ಶಿಕ್ಷಕಿಗೆ ಮತ್ತು ತಾಯಿಗೆ ತಿಳಿಸಿದ್ದಳು. ಬಳಿಕ ತಾಯಿ ಶಾಲೆಗೆ ಬಂದು ದೂರು ನೀಡಿದ್ದರಾದರೂಶಾಲೆಯಿಂದ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.

ಹೀಗಾಗಿ ಆಕ್ರೋಶಗೊಂಡ ಪೋಷಕರು ಶಾಲೆಗೆ ಆಗಮಿಸಿ ಪ್ರಾಂಶುಪಾಲರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆಗ ಪ್ರಾಂಶುಪಾಲರು ಭೇಟಿಗೆ ನಿರಾಕರಿಸಿದ್ದರಿಂದ ಭದ್ರತಾ ಸಿಬ್ಬಂದಿ ಅವರಿಗೆ ಅವಕಾಶ ನೀಡದೇ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡ ಬಾಲಕಿ ತಂದೆ ತನ್ನ ಒಂದಿಷ್ಟು ಸ್ನೇಹಿತರೊಂದಿಗೆ ಶಾಲೆ ಮೇಲೆ ದಾಳಿ ಮಾಡಿ ಇಡೀ ಶಾಲೆಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ಕೆನ್ನಾಲಿಗೆಗೆ ಶಾಲೆಯಲ್ಲಿದ್ದ ಪೀಠೋಪಕರಗಳೆಲ್ಲಾ ಭಸ್ಮವಾಗಿದೆ. ಅಲ್ಲದೆ ಸ್ಥಳದಲ್ಲಿದ್ದ ಪೊಲೀಸ್ ವಾಹನಗಳು ಮತ್ತು ಬೈಕ್ ಗಳು ಕೂಡ ಸುಟ್ಟು ಹೋಗಿವೆ. ಈ ವೇಳೆ ಶಾಲೆಯಲ್ಲಿದ್ದ ಮಕ್ಕಳು ಸಿಬ್ಬಂದಿಗಳು ಸೇರಿದಂತೆ ಎಲ್ಲಾ 500 ಜನರನ್ನು ರಕ್ಷಿಸಲಾಗಿದೆ. ಪ್ರಸ್ತುತ ಆರೋಪಿ ಅಜಯ್ ಧಾಂಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Write A Comment