ಮನೋರಂಜನೆ

ಪನಾಮ ಪೇಪರ್ಸ್ ನಂಟು: ಸೇವ್ ಟೈಗರ್ ಅಭಿಯಾನದಿಂದ ಅಮಿತಾಬ್ ಕೈ ಬಿಡಲು ಕಾಂಗ್ರೆಸ್ ಆಗ್ರಹ

Pinterest LinkedIn Tumblr

amith

ಮುಂಬಯಿ: ಪನಾಮ ಪೇಪರ್ಸ್ ದಾಖಲೆಗಳಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೆಸರು ತಳುಕು ಹಾಕಿಕೊಂಡಿರುವುದರಿಂದ ಮಹಾರಾಷ್ಟ್ರ ಸರ್ಕಾರದ ಸೇವ್ ಟೈಗರ್ ಅಭಿಯಾನದಿಂದ ಅಮಿತಾಬ್ ಅವರನ್ನು ಕೈ ಬಿಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಇನ್ನು ಪನಾಮ ಪೇಪರಸ್ ಪ್ರಕರಣದಿಂದ ಕ್ಲೀನ್ ಚಿಟ್ ಪಡೆಯುವವರೆಗೂ ಅವರನ್ನು ಅಭಿಯಾನದಿಂದ ಕೈ ಬಿಡುವಂತೆ ಒತ್ತಾಯಿಸಿರುವ ಕಾಂಗ್ರೆಸ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಸಲಹಾ ಸಮಿತಿಯಿಂದ ಪದಚ್ಯುತಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಇನ್ನು ಗುರುವಾರ ನಡೆದ ಸಮಿತಿ ಸಭೆಗೆ ಬಚ್ಚನ್ ಗುರುವಾರ ಹಾಜರಾಗಿದ್ದರು. ಪನಾಮಾ ಪೇಪರ್ಸ ಪ್ರಕರಣದಲ್ಲಿ ಬಚ್ಚನ್ ಹೆಸರು ಕೇಳಿ ಬಂದಿರುವುದರಿಂದ ಎರಡು ಯೋಜನೆಗಳಿಂದ ಬಚ್ಚನ್ ಅವರನ್ನು ದೂರ ಇಡುವಂತೆ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ವಿಖೇ ಪಾಟೀಲ್ ಒತ್ತಾಯಿಸಿದ್ದಾರೆ.

Write A Comment