ರಾಷ್ಟ್ರೀಯ

ಎನ್‌ಐಎ ಅಧಿಕಾರಿ ತಂಜಿಲ್ ಅಹಮ್ಮದ್ ಹತ್ಯೆ ಪ್ರಕರಣ : ಇಬ್ಬರ ಬಂಧನ

Pinterest LinkedIn Tumblr

adiನವದೆಹಲಿ, ಏ.7- ಕಳೆದ ವಾರ ಉತ್ತರ ಪ್ರದೇಶದ ಬಿಬನೋರ್‌ನಲ್ಲಿ ಹತ್ಯೆಗೀಡಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿ ತಂಜಿಲ್ ಅಹ್ಮದ್ ಅವರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವಾರ ಬಿಜ್ನೋರ್‌ನಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿ ತನ್ನ ಹೆಂಡತಿ-ಮಕ್ಕಳೊಂದಿಗೆ ವಾಪಸಾಗುತ್ತಿದ್ದ ತನಿಖಾಧಿಕಾರಿ ತಂಜಿಲ್ ಅಹ್ಮದ್ ಅವರ ಕಾರನ್ನು ಅಡ್ಡಗಟ್ಟಿ ಗುಂಡು ಹಾರಿಸಿದ್ದರು. ತಂಜಿಲ್ ಅವರಿಗೆ 16 ಗುಂಡುಗಳು ಬಿದ್ದಿದ್ದವು.

ಪತ್ನಿ ಫರ್ಜಾನಾರಿಗೆ ಎರಡು ಗುಂಡುಗಳು ಬಿದ್ದಿದ್ದು, ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಕ್ಕಳು ಪಾರಾಗಿದ್ದರು. ವಶಕ್ಕೆ ಪಡೆದಿರುವ ಇಬ್ಬರಲ್ಲಿ ಒಬ್ಬನು ಷಾರ್ಪ್‌ಶೂಟರ್ ಆಗಿದ್ದಾನೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Write A Comment