ರಾಷ್ಟ್ರೀಯ

ಪ್ರತ್ಯೂಷಾ ಅಳುತ್ತಿದ್ದಳು, ಜೋರಾಗಿ ಮಾತಾಡ್ತಿದ್ದಳು: ನೆರೆಮನೆಯ ಅನುಜ್‌

Pinterest LinkedIn Tumblr

Pratysha1ಹೊಸದಿಲ್ಲಿ : ಆನಂದಿ ಟಿವಿ ಸೀರಿಯಲ್‌ನ ನಟಿ ಪ್ರತ್ಯೂಷಾ ಬ್ಯಾನರ್ಜಿ ಇಹಲೋಕ ತ್ಯಜಿಸುವ ಕೆಲವೇ ತಾಸು ಮುನ್ನ ಆಕೆಯ ನೆರೆಮನೆ ನಿವಾಸಿಯಾಗಿರುವ, ನಟ ಅನುಜ್‌ ಸಚ್‌ದೇವ ಅವರು “ಪ್ರತ್ಯೂಷಾ ತನ್ನ ಮನೆಯೊಳಗೆ ಫೋನಿನಲ್ಲಿ ಯಾರೊಂದಿಗೋ ಭಾರೀ ದೊಡ್ಡ ಸ್ವರದಲ್ಲಿ ಮಾತನಾಡುತ್ತಾ ಅಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಪ್ರತ್ಯೂಷಾ ಬ್ಯಾನರ್ಜಿ ಮತ್ತು ಆಕೆಯ ಬಾಯ್‌ ಫ್ರೆಂಡ್‌ ರಾಹುಲ್‌ರಾಜ್‌ ಸಿಂಗ್‌ ಜತೆಗೂಡಿ ವಾಸಿಸಿಕೊಂಡಿದ್ದ ಕಟ್ಟಡದಲ್ಲೇ ಇರುವ ಇನ್ನೊಂದು ಮನೆಯಲ್ಲಿ ವಾಸವಾಗಿರುವ ಮತ್ತು ಸ್ವತಃ ನಟರಾಗಿರುವ ಅನುಜ್‌ ಸಚ್‌ದೇವ ಅವರು ಡಿಎನ್‌ಎ ಜತೆಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.

“ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ನಾನು ನನ್ನ ಮನೆಯಿಂದ ಹೊರಟಿದ್ದೆ. ಲಿಫ್ಟ್ ಗಾಗಿ ಕಾಯುತ್ತಿದ್ದೆ. ಆಗ ಪ್ರತ್ಯೂಷಾ ತನ್ನ ಮನೆಯಲ್ಲಿ ಫೋನಿನಲ್ಲಿ ಯಾರೊಂದಿಗೋ ಗಟ್ಟಿಯಾಗಿ ಮಾತನಾಡುತ್ತಿದ್ದಳು. ಒಡ ನೆಯೇ ಆಕೆ ಗಟ್ಟಿಯಾಗಿ ಅಳುತ್ತಿರುವುದು ಕೇಳಿಬಂತು. ಆಕೆಯನ್ನು ಹೋಗಿ ನೋಡೋಣ ಎಂದೆನಿಸಿತು. ಆದರೆ ಅಷ್ಟರೊಳಗೆ ಲಿಫ್ಟ್ ಬಂತು. ನಾನೂ ಅರ್ಜೆಂಟ್‌ನಲ್ಲಿದ್ದೆ….

“…..ಮೇಲಾಗಿ ನಾನು ಪ್ರತ್ಯೂಷಾ ಜತೆ ಅಷ್ಟೇನೂ ನಿಕಟವಾಗಿರಲಿಲ್ಲ; ಆಕೆಯನ್ನು ಒಡನೆಯೇ ಹೋಗಿ ಕಾಣದಿರಲು ಅದುವೇ ಮುಖ್ಯ ಕಾರಣವಾಗಿತ್ತು. ಕೆಲವೊಮ್ಮೆ ನೀವು ಅನಗತ್ಯವಾಗಿ ಇತರರ ವಿಷಯದಲ್ಲಿ ತಲೆ ಹಾಕುವುದು ಅವರಿಗೆ ಅದು ಇಷ್ಟವಾಗುವುದಿಲ್ಲ ; ಹಾಗಾಗಿ ನಾನು ಸುಮ್ಮನಿದ್ದೆ. ಆದರೆ ಅದಾಗಿ ತಾಸೊಳಗೆ ಪ್ರತ್ಯೂಷಾ ತನ್ನ ಜೀವನವನ್ನು ಕೊನೆಗೊಳಿಸಿಕೊಂಡ ಸುದ್ದಿ ಕೇಳಿದೆ. ನಾನು ಆಕೆಯನ್ನು ಆಹೊತ್ತಿನಲ್ಲಿ ಹೋಗಿ ಕಂಡಿದ್ದರೆ ಒಳ್ಳೆಯದಿತ್ತು ಎಂದು ಈಗ ನನಗೆ ಅನ್ನಿಸುತ್ತಿದೆ’ ಎಂದು ಅನುಜ್‌ ಹೇಳಿದ್ದಾರೆ.
-ಉದಯವಾಣಿ

Write A Comment