ಮನೋರಂಜನೆ

ಶುಭಾಪೂಂಜಾ ಎರಡು ಚಿತ್ರ ಒಂದೇ ದಿನ ರಿಲೀಸ್‌

Pinterest LinkedIn Tumblr

10ಶುಭಾಪೂಂಜಾ ಚಿತ್ರರಂಗಕ್ಕೆ ಬಂದು ಬರೋಬ್ಬರಿ ಒಂದು ದಶಕ ಗತಿಸಿದೆ. “ಜಾಕ್‌ಪಾಟ್‌’ ಮೂಲಕ ತಮ್ಮ ಸಿನಿಪಯಣ ಶುರುಮಾಡಿದರಾದರೂ, ಅವರಿಗೆ ಮಾತ್ರ ಹೇಳಿಕೊಳ್ಳುವಂತಹ ಮೊದಲ “ಜಾಕ್‌ಪಾಟ್‌’ ಹೊಡೀಲಿಲ್ಲ. ನಂತರದ ದಿನಗಳಲ್ಲಿ ಸಾಲು ಸಾಲು ಸಿನಿಮಾ ಮಾಡಿದರು.
ಗೆದ್ದರು, ಬಿದ್ದರು, ವಿವಾದಕ್ಕೊಳಗಾದರು. ಕೊನೆಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತ ಬಂದರು. ಶುಭಾಪೂಂಜಾಗೆ ಈಗ ಡಬ್ಬಲ್‌ ಖುಷಿ. ಕಾರಣ, ಈ ವಾರ ಅವರು ಅಭಿನಯಿಸಿರುವ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. “ಜೈ ಮಾರುತಿ 800′ ಹಾಗು “ಶ್ರೀ ಸಿಗಂಧೂರು ಚೌಡೇಶ್ವರಿ’ ಇದೇ ಮೊದಲ ಸಲ ಎರಡು ಚಿತ್ರ ಒಟ್ಟಿಗೆ ರಿಲೀಸ್‌ ಆಗುತ್ತಿರುವ ಖುಷಿಯಲ್ಲಿರುವ ಶುಭಾ, ಆ ಬಗ್ಗೆ ಚಿಟ್‌ಚಾಟ್‌ನಲ್ಲಿ ಮಾತಾಡಿದ್ದಾರೆ.

ಒಟ್ಟಿಗೆ ಎರಡು ಚಿತ್ರ ರಿಲೀಸ್‌ ಆಗ್ತಿವೆ ಹೇಗನ್ನಿಸುತ್ತೆ?
-ಖುಷಿಯಾಗ್ತಿದೆ. ಈ ಸಲ “ಜಾಕ್‌ಪಾಟ್‌’ ಗ್ಯಾರಂಟಿ. ಯಾಕೆಂದರೆ, “ಜೈ ಮಾರುತಿ 800′ ಪಕ್ಕಾ ಕಮರ್ಷಿಯಲ್‌ ಚಿತ್ರ. ಅದರ ಮೇಲೆ ನಿರೀಕ್ಷೆ ಇದೆ. ಇನ್ನೊಂದು “ಶ್ರೀ ಸಿಗಂಧೂರು ಚೌಡೇಶ್ವರಿ’ ಇದು ಪಕ್ಕಾ ಭಕ್ತಿಪ್ರಧಾನ ಚಿತ್ರ. ಇಲ್ಲಿ ಇನ್ನೊಂದು ಸ್ಪೆಷಾಲಿಟಿ ಇದೆ. ಏನೆಂದರೆ, ಯುಗಾದಿ ದಿನದಂದೇ ನನ್ನ ಎರಡು ಚಿತ್ರಗಳು ತೆರೆಕಾಣುತ್ತಿವೆ. ಅದರಲ್ಲೂ ಎರಡೂ ಚಿತ್ರಗಳ ಸಂದೇಶ ಕೂಡ ಬೇರೆ ಬೇರೆಯಾಗಿವೆ. ಇದಕ್ಕಿಂತ ಖುಷಿ ಬೇಕಾ? ಎರಡು ಚಿತ್ರಗಳೇನೋ ರಿಲೀಸ್‌ ಆಗ್ತಿವೆ. ಖುಷಿ, ಭಯ, ಆತಂಕ ಇದ್ದೇ ಇರುತ್ತೆ. ಮಾರುತಿ ಮತ್ತು ಚೌಡೇಶ್ವರಿ ದಯೆ ಇದೆ ಅಷ್ಟು ಸಾಕು.

ಎರಡು ಚಿತ್ರಗಳ ಬಗ್ಗೆ ಹೇಳ್ತೀರಾ?
– “ಶ್ರೀ ಸಿಂಗಧೂರು ಚೌಡೇಶ್ವರಿ’ ಚಿತ್ರದಲ್ಲಿ ನಾನೊಬ್ಬ ಭಕ್ತೆ. ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ ಲೈಫ್ನಲ್ಲೂ ನಾನು ಸಿಗಂಧೂರು ದೇವಿಯನ್ನು ಆರಾಧಿಸುತ್ತೇನೆ. ಪ್ರತಿ ತಿಂಗಳಿಗೆ ಎರಡೂ¾ರು ಬಾರಿ ಹೋಗಿಬರುತ್ತಿದ್ದೆ. ಆ ಸಿನಿಮಾ ನನಗೆ ಸಿಕ್ಕಿದ್ದು ಅದೃಷ್ಟ. ಚಿತ್ರದಲ್ಲಿ ಮೂರು ಕಥೆಗಳು ಬರುತ್ತವೆ. ಅದರಲ್ಲಿ ಒಂದು ಕಥೆಯಲ್ಲಿ ಮಾತ್ರ ನಾನು ಬರಿ¤àನಿ. ಅದೊಂದು ಭಕ್ತಿಪ್ರಧಾನ ಚಿತ್ರವಾದ್ದರಿಂದ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು, “ಜೈ ಮಾರುತಿ 800′ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇದೆ. ಅಲ್ಲಿ ಕ್ಯೂಟ್‌ ಪಾತ್ರ. ಇದುವರೆಗೆ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದೆ. ಇಲ್ಲಿ ಪಕ್ಕಾ ದೇಸಿ ಹುಡುಗಿ. ನಟನೆಗೆ ಹೆಚ್ಚು ಅವಕಾಶವಿದೆ. ನಿಜಕ್ಕೂ ಜನರಿಗೆ ಮನರಂಜನೆ ಕೊಡುತ್ತೆ ಎಂಬ ವಿಶ್ವಾಸವಿದೆ .

ಅಂತೂ ಇಂಡಸ್ಟ್ರಿಗೆ ಬಂದು ಒಂದು ದಶಕ ಆಗೋಯ್ತು?
– ಹೌದು. ನನಗೇ ನಂಬಲಾಗುತ್ತಿಲ್ಲ. ಈಗಷ್ಟೇ ಇಂಡಸ್ಟ್ರಿಗೆ ಕಾಲಿಟ್ಟಿದ್ದೇನೇನೋ ಅಂತ ಅನಿಸುತ್ತಿದೆ. ಆರಂಭದ ಉತ್ಸಾಹ ಕುಗ್ಗಿಲ್ಲ. ಆದರೆ, ಹಿಂದಿರುಗಿ ನೋಡಿದರೆ, ಹತ್ತು ವರ್ಷ ಕಳೆದು ಹೋಯ್ತಾ ಅಂತ ಅಚ್ಚರಿಯಾಗುತ್ತೆ. ಏನನ್ನೂ ಸಾಧಿಸಿಲ್ಲ. ಸಾಧಿಸೋದು ಬಹಳವಿದೆ. ಮುಂದೆ ಒಳ್ಳೆಯ ಚಿತ್ರ ಮಾಡೋದು. ಸೈ ಎನಿಸಿಕೊಳ್ಳೋದಷ್ಟೇ ನನ್ನ ಗುರಿ.

ಹಾಗಾದರೆ ತುಂಬಾ ಬಿಜಿ ಇರಬೇಕು?
– ಅಷ್ಟೇನೂ ಇಲ್ಲ. ಆದರೆ, ಬರುವ ಚಿತ್ರ ಒಪ್ಪಕೊಂಡಿದ್ದರೆ, ಇಷ್ಟೊತ್ತಿಗಾಗಲೇ ಸಾಕಷ್ಟು ಚಿತ್ರ ಮಾಡಬಹುದಿತ್ತು. ಹಿಂದೆ ತಪ್ಪು ಆಯ್ಕೆ ಮಾಡಿ ಎಡವಟ್ಟು ಮಾಡಿಕೊಂಡೆ. ಇನ್ನು ಮುಂದೆ ತಪ್ಪು ಆಗಲ್ಲ. ಎಚ್ಚರದ ಹೆಜ್ಜೆ ಇಡ್ತೀನಿ. ಸದ್ಯಕ್ಕೆ ಕನ್ನಡದಲ್ಲಿ ಮೂರು ಸ್ಕ್ರಿಪ್ಟ್ ಕೇಳಿದ್ದೇನೆ. ನನ್ನ ಎರಡು ಚಿತ್ರ ತೆರೆಕಂಡ ಬಳಿಕ ಆ ಚಿತ್ರಗಳನ್ನ ಒಪ್ಪಿಕೊಳ್ತೀನಿ.

ತಮಿಳು ಯಾನ ಹೇಗಿದೆ?
– “ಮಾತಂಗಿ’ ಮುಗಿದು, ಡಬ್ಬಿಂಗ್‌ ಹಂತದಲ್ಲಿದೆ. ತಮಿಳಿನಿಂದಲೂ ಆಲ್ಲಿಂದಲೂ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯಕ್ಕೆ ಇಲ್ಲೇ ಅವಕಾಶ ಹೆಚ್ಚಾಗಿ ಬರಿ¤ವೆ. ಮೊದಲ ಜಾಕ್‌ಪಾಟ್‌ ಮಿಸ್‌ ಆಯ್ತು. “ಮಾರುತಿ’ ಮೂಲಕ ಎರಡನೇ ಜಾಕ್‌ಪಾಟ್‌ ಹೊಡೆಯೋದು ಗ್ಯಾರಂಟಿ.
-ಉದಯವಾಣಿ

Write A Comment