ಅಂತರಾಷ್ಟ್ರೀಯ

ಟಿ20ಯಲ್ಲಿ ಜಸ್ಟ್ ಮಿಸ್ ಆಯ್ತು ಗೇಲ್ ದಾಖಲೆ!

Pinterest LinkedIn Tumblr

gayle

ಕೋಲ್ಕತ್ತಾ: ವೆಸ್ಟ್ ಇಂಡೀಸ್‍ನ ಬ್ಯಾಟ್ಸ್‍ಮನ್ ಕ್ರಿಸ್‍ಗೇಲ್ ಫೈನಲ್‍ನಲ್ಲಿ ಎರಡು ಸಿಕ್ಸರ್ ಹೊಡೆದಿದ್ದರೆ ಟಿ20 ಕ್ರಿಕೆಟ್‍ನಲ್ಲಿ 100 ಸಿಕ್ಸರ್ ಹೊಡೆದ ಪ್ರಥಮ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು.

ಹೌದು. ಗೇಲ್ ಇದುವರೆಗೆ 98 ಸಿಕ್ಸರ್‍ಗಳನ್ನು ಹೊಡೆದಿದ್ದು, ಫೈನಲ್ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲೇ 11 ಸಿಕ್ಸರ್ ಹೊಡೆದಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧ ಎರಡು ಸಿಕ್ಸರ್ ಹೊಡೆದಿದ್ದರೆ ಟಿ20ಯಲ್ಲಿ ಸಿಕ್ಸರ್‍ನಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕಗೆ ಪಾತ್ರವಾಗುತ್ತಿದ್ದರು.

ಟಿ20ಯಲ್ಲಿ ಗೇಲ್ ಬಿಟ್ಟರೆ ನ್ಯೂಜಿಲ್ಯಾಂಡ್‍ನ ನಿವೃತ್ತ ಆಟಗಾರ ಮೆಕಲಂ 61 ಸಿಕ್ಸರ್ ಹೊಡೆದ್ದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

Write A Comment