ರಾಷ್ಟ್ರೀಯ

ಎನ್‌ಐಎ ಅಧಿಕಾರಿ ದೇಹ ಹೊಕ್ಕಿದ್ದು 24 ಗುಂಡು

Pinterest LinkedIn Tumblr

NIA-OFFICER1ಬಿಜ್ನೋರ್/ನವದೆಹಲಿ (ಪಿಟಿಐ): ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ರಾಷ್ಟ್ರೀಯ ತನಿಖಾ ಪಡೆಯ(ಎನ್‌ಐಎ) ಅಧಿಕಾರಿ ತಂಜಿಲ್ ಅಹಮದ್ ಅವರ ದೇಹ ಹೊಕ್ಕಿದ್ದು ಬರೊಬ್ಬರಿ 24 ಗುಂಡುಗಳು ಎಂದು ಪೊಲೀಸರು ಹೇಳಿದ್ದಾರೆ.
ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಕಮಾಂಡೆಂಟ್‌ ಆಗಿದ್ದ ಮೊಹಮ್ಮದ್ ತಂಜಿಲ್ ಅಹಮದ್(46) ಎನ್‌ಐಎ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು.
ಶನಿವಾರ ಮಧ್ಯರಾತ್ರಿ ಮದುವೆ ಮುಗಿಸಿಕೊಂಡು ಕುಟುಂಬದೊಟ್ಟಿಗೆ ‘ವ್ಯಾಗನ್–ಆರ್‌’ ಕಾರಿನಲ್ಲಿ ಮರಳುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಅಪಚಿತ ದುಷ್ಕರ್ಮಿಗಳಿಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಘಟನೆಯಲ್ಲಿ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. 24 ಗುಂಡುಗಳು ತಂಜಿಮ್ ಅವರ ದೇಹ ಹೊಕ್ಕಿವೆ. ಅವರ ಪತ್ನಿ ಫರ್ಜಾನಾ ಅವರಿಗೆ ನಾಲ್ಕು ಗುಂಡು ತಗುಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಕಾರಿನ ಹಿಂಬದಿ ಸೀಟಿನಲ್ಲಿ 14 ವರ್ಷ ಮಗಳು ಹಾಗೂ 12 ವರ್ಷದ ಮಗ ಇದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತಂದೆಯ ಭೀಕರ ಹತ್ಯೆ ಕೃತ್ಯ ಅವರ ಕಣ್ಣೆದುರೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಹತ್ಯೆಗೆ 9ಎಂಎಂ ಪಿಸ್ತೂಲ್ ಬಳಕೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಂಜಿಮ್ ಅವರು ಬಿಜ್ನೋರ್ ಜಿಲ್ಲೆಯ ಸಾಹಸಪುರದಲ್ಲಿ ಮದುವೆ ಮುಗಿಸಿಕೊಂಡು ಕುಟುಂಬದೊಟ್ಟಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

2009ರಲ್ಲಿ ಎನ್‌ಐಎ ಸ್ಥಾಪನೆಗೊಂಡಾಗಿನಿಂದಲೂ ತಂಜಿಮ್ ಅವರು ಎನ್‌ಐಎಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Write A Comment