ಮನೋರಂಜನೆ

ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಟಿ ಪ್ರಿಯಾಂಕಾ ಛೋಪ್ರಾ ! ಏನಿದು ವಿಷಯ …ಆತ್ಮಹತ್ಯೆಗೆ ಯತ್ನಿಸಿದ್ದು ಯಾಕಾಗಿ …?

Pinterest LinkedIn Tumblr

priyanka-chopra

ಮುಂಬಯಿ: ಕಿರುತೆರೆ ನಟಿ ಪ್ರತ್ಯೂಷಾ ಆತ್ಮಹತ್ಯೆ ಸಂಬಂಧ ಎಲ್ಲರೂ ಆಘಾತ ವ್ಯಕ್ತ ಪಡಿಸುತ್ತಿದ್ದಾರೆ. ಈ ವೇಳೆ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ನಟಿ ಪ್ರಿಯಾಂಕಾ ಛೋಪ್ರಾ ಅವರ ಎಕ್ಸ್ ಮ್ಯಾನೇಜರ್ ಬಿಚ್ಚಿಟ್ಟಿದ್ದಾರೆ.

ಮಾಜಿ ಮಿಸ್ ವರ್ಲ್ಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪ್ರಿಯಾಂಕಾ ಅವರ ಎಕ್ಸ್ ಮ್ಯಾನೇಜರ್ ಪ್ರಕಾಶ್ ಜಾಜು ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಕಾಶ್ ಈಗ ತುಂಬಾ ಸ್ಟ್ರಾಂಗ್ ಆಗಿರುವ ಪ್ರಿಯಾಂಕಾ ಛೋಪ್ರಾ ಮಾನಸಿಕವಾಗಿ ತುಂಬಾ ದುರ್ಬಲರಾಗಿದ್ದರು.

ಪದೇ ಪದೇ ತಮ್ಮ ಎಕ್ಸ್ ಬಾಯ್ ಫ್ರೆಂಡ್ ಆಸೀಮ್ ಮರ್ಚೆಂಟ್ ಜೊತೆ ಜಗಳ ಮಾಡುತ್ತಿದ್ದರು. ಅದಾದ ನಂತರ ಮಧ್ಯರಾತ್ರಿ ನನಗೆ ಅಳುತ್ತಾ ಫೋನ್ ಮಾಡುತ್ತಿದ್ದರು. ಆ ವೇಳೆ ನಾನು ಪ್ರಿಯಾಂಕಾರನ್ನು ಸಮಾಧಾನ ಪಡಿಸುತ್ತಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಒಂದು ಬಾರಿ ಅಸೀಮ್ ಜೊತೆ ಗಲಾಟೆ ಮಾಡಿಕೊಂಡು ಮುಂಬಯಿನ ವಾಸಾಯಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರು. ಆ ವೇಳೆ ಅವರನ್ನು ಸಮಾಧಾನ ಪಡಿಸಿ ವಾಪಸ್ ಕರೆತರುವಲ್ಲಿ ಸಾಕಾಯಿತು ಎಂದು ಪ್ರಕಾಶ್ ಟ್ಟೀಟ್ ಮಾಡಿದ್ದಾರೆ.

2002 ರಲ್ಲಿ ಆಸೀಮ್ ಮರ್ಚೆಂಟ್ ಅವರ ತಾಯಿ ತೀರಿಕೊಂಡಾಗ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪ್ರಿಯಾಂಕಾ ಛೋಪ್ರಾ ಅವರ ಮ್ಯಾನೇಜರ್ ಆಗಿದ್ದ ಪ್ರಕಾಶ್ ಕಾರಣಾಂತರಗಳಿಂದ ಪ್ರಿಯಾಂಕಾ ಮ್ಯಾನೇಜರ್ ಪೋಸ್ಟ್ ನಿಂದ ತೆಗೆದು ಹಾಕಿದ್ದರು. ಇದಾದ ನಂತರ ಪ್ರಕಾಶ್ ಪ್ರಿಯಾಂಕಾ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ನಂತರ ಪ್ರಿಯಾಂಕಾ ತಂದೆ ಪ್ರಕಾಶ್ ವಿರುದ್ಧ ಕೇಸು ದಾಖಲಿಸಿ 67 ದಿನಗಳ ಕಾಲ ಜೈಲುವಾಸ ಅನುಭವಿಸುವಂತೆ ಮಾಡಿದ್ದರು.

Write A Comment