ಅಂತರಾಷ್ಟ್ರೀಯ

ಸೌದಿ ಅರೇಬಿಯಾದ ಕಾರ್ಮಿಕರ ಕ್ಯಾಂಪ್‌ನಲ್ಲಿ ಜನರೊಂದಿಗೆ ಬೆರೆತು ಊಟ ಮಾಡಿದ ಮೋದಿ !

Pinterest LinkedIn Tumblr

7

ಸೌದಿ ಅರೇಬಿಯಾ: ತಮ್ಮ ಭದ್ರತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಲ್ಲಿರುವ ಎಲ್ ಆ್ಯಂಡ್ ಟಿ ಕಾರ್ಮಿಕರ ಕ್ಯಾಂಪ್‌ಗೆ ಹೋಗಿ ಅಲ್ಲಿನ ಕಾರ್ಮಿಕರೊಂದಿಗೆ ಕೆಲವು ಕ್ಷಣಗಳನ್ನು ಕಳೆದಿದ್ದಾರೆ. ಭಾರತೀಯ ಕಾರ್ಮಿಕರ ಕ್ಯಾಂಪ್‌ಗೆ ತೆರಳಿ ಅಲ್ಲಿನ ಜನರೊಂದಿಗೆ ಮಾತನಾಡಿ, ಒಟ್ಟಿಗೆ ಕುಳಿತು ಊಟ ಮಾಡಿ, ಸೆಲ್ಫಿ ಕ್ಲಿಕ್ಕಿಸಿದ ಮೋದಿ ಜನರ ಮಾತುಗಳನ್ನು ಆಲಿಸಿ ಅವರೊಂದಿಗೆ ಒಡನಾಡಿದ್ದು ಎಲ್ಲರನ್ನೂ ಅಚ್ಚರಿ ಪಡಿಸಿದೆ. ಮೋದಿ ಜತೆ ಸೆಲ್ಫಿ ಕ್ಲಿಕ್ಕಿಸಿದವರೆಲ್ಲಾ ಅದನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ, ಜನಾನುರಾಗಿಯಾದ ಮೋದಿಗೆ ಜೈ ಎಂದಿದ್ದಾರೆ.

ಅಂದಹಾಗೆ ಕಾರ್ಮಿಕರ ಕ್ಯಾಂಪ್‌ಗೆ ಭೇಟಿ ಮಾಡಿ ಅಲ್ಲಿ ಅವರೊಂದಿಗೆ ಕುಶಲೋಪರಿ ನಡೆಸಿದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ. ಕಾರ್ಮಿಕರ ಕ್ಯಾಂಪ್ ಭೇಟಿಯ ಫೋಟೋ ಮತ್ತು ವೀಡಿಯೋಗಳನ್ನು ಮೋದಿಯವರೇ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ದೇಶದ ಪ್ರಧಾನಿಯೊಬ್ಬರು ಕಾರ್ಮಿಕ ಕ್ಯಾಂಪ್ ನಲ್ಲಿ ಅವರೊಂದಿಗೆಯೇ ಬೆರೆತು ಆಹಾರ ಸೇವಿಸುತ್ತಿರುವ ಫೋಟೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿನ ಅನಿವಾಸಿ ಭಾರತೀಯರು ಮೋದಿಯ ಈ ನಡೆಯನ್ನು ಹಾಡಿ ಹೊಗಳಿರುವ ಹಲವಾರು ಪೋಸ್ಟ್ ಗಳು ಸಾಮಾಜಿಕ ತಾಣಗಳಲ್ಲೀಗ ಹರಿದಾಡುತ್ತಿವೆ.

Write A Comment