ರಾಷ್ಟ್ರೀಯ

ಪಠಾನ್ ಕೋಟ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್ಐಎ ಅಧಿಕಾರಿಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

Pinterest LinkedIn Tumblr

Mohammad Tanzil

ಬಿಜ್ನೂರ್: ಪಠಾನ್ ಕೋಟ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿ ಮೊಹಮ್ಮದ್ ತಂಜೀಲ್ ಅವರನ್ನು ದುಷ್ಕರ್ಮಿಗಳಿಬ್ಬರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಕಳೆದ ರಾತ್ರಿ ಸಂಬಂಧಿಕರೊಬ್ಬರ ಮದುವೆಗೆ ಮಕ್ಕಳು ಹಾಗೂ ಹೆಂಡತಿ ಜತೆ ಮೊಹಮ್ಮದ್ ಅವರು ತೆರಳುತ್ತಿದ್ದಾಗ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳಿಬ್ಬರು ಮೊಹಮ್ಮದ್ ತಂಜೀರ್ ಕಾರು ತಡೆದು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳ ಗುಂಡೆಟ್ಟಿಗೆ ಮೊಹಮ್ಮದ್ ತಂಜೀರ್ ಅವರು ಸ್ಥಳದಲ್ಲೇ ಮೃತಪಟ್ಟರೆ, ತಂಜೀರ್ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Write A Comment