ಕನ್ನಡ ವಾರ್ತೆಗಳು

ರಿಕ್ಷಾ ಚಾಲಕರೊಬ್ಬರ ಬಿನ್ನ ಸಾಮರ್ಥ್ಯದ ಮಗನಿಂದ ವಿಶೇಷ ಸಾಧನೆ.

Pinterest LinkedIn Tumblr

Deekshith_sport_man

ಮಂಗಳೂರು/ಮುಂಬಯಿ/ಏ.03: ಇನ್ನಂಜೆ ಗ್ರಾಮದ ಕಲ್ಯಾಲು ನಿವಾಸಿ ಆಟೋರಿಕ್ಷಾ ಚಾಲಕ ಶ್ರೀ ಸುರೇಂದ್ರ ಪೂಜಾರಿ ಹಾಗೂ ಶ್ರೀಮತಿ ಗಿರಿಜ ಇವರ ಸುಪುತ್ರನಾಗಿರುವ “ದೀಕ್ಷಿತ್ ಪೂಜಾರಿ” ಇವನು ಜನಿಸುವಾಗಲೇ ವಿಶೇಷ ಚೇತನ ಮಗುವಾಗಿದ್ದು. ಇವನು ತನ್ನ ಪ್ರಾರ್ಥಮಿಕ ಶಿಕ್ಷಣವನ್ನು 1ನೇ ತರಗತಿಯಿಂದ 5ನೇ ತರಗತಿವರೆಗೆ ಇನ್ನಂಜೆ ಶಾಲೆಯಲ್ಲಿ ಕಲಿತು. ತದನಂತರ 6ನೇ ತರಗತಿಯಿಂದ ತನ್ನ ವಿದ್ಯಾಭ್ಯಾಸವನ್ನು ಕಾಪುವಿನ ಮಹಾದೇವಿ ಶಾಲೆಯಲ್ಲಿ ಮುಂದುವರಿಸಿದ್ದು, ಪ್ರಸ್ತುತ 10 ನೇ ತರಗತಿಯಲ್ಲಿ ಓದುತ್ತಿದ್ದು ಅಲ್ಲಿನ ಶಿಕ್ಷಕರ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ 2015ನೇ ಸಾಲಿನ ಬೈಲುರು ಪ್ರೌಢಶಾಲೆಯಲ್ಲಿ ನಡೆದ ವಿಶೇಷ ಸಾಮರ್ಥ್ಯದ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ ದಲ್ಲಿ 100 ಮಿ ಓಟ, ಈಟಿ ಎಸೆತ ಮತ್ತು ಗುಂಡು ಎಸೆತಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತದನಂತರ ಚಿಕ್ಕಬಳ್ಳಾಪುರ ದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಈಟಿ ಎಸೆತದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹುಟ್ಟು ಕಿವುಡ ಹಾಗೂ ಮೂಗನಾಗಿ ಜನಿಸಿದ ದೀಕ್ಷಿತ್ ಪೂಜಾರಿ ತನ್ನ ಗ್ರಹಿಕೆಯಿಂದ ಎಲ್ಲರೊಡನೆ ಬೆರೆತು ಬಿನ್ನ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟದಲ್ಲಿ ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ, ರಾಜ್ಯ ಮಟ್ಟದಿಂದ ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಅಂಗವೈಕಲ್ಯ ತನಗೊಂದು ಶಾಪವೇ ಅಲ್ಲ ಎಂದು ಸಾಬೀತುಪಡಿಸಿದ್ದಾರೆ. ಈ ಮೂಲಕ ತನ್ನ ಹೆತ್ತವರಿಗೂ, ತಾನು ಕಲಿತ ಶಾಲೆಗೂ, ಹಾಗೂ ಊರಿಗೂ ಹೆಮ್ಮೆಯಾಗುವಂತೆ ಸಾಧನೆ ಮಾಡಿದ್ದು. ಮಗನ ಪ್ರತಿಯೊಂದು ಸಾಧನೆಗೂ ತಂದೆಯಾದ ಶ್ರೀ ಸುರೇಂದ್ರ ಪೂಜಾರಿಯವರು ನಿರಂತರ ಪ್ರೋತ್ಸಾಹ ನೀಡಿರುತ್ತಾ ಬಂದಿದ್ದಾರೆ.

ಇವರಿಗೆ ನಮ್ಮ ನಿಮ್ಮಲ್ಲರ ಪ್ರೋತ್ಸಾಹದ ಅಗತ್ಯ ಖಂಡಿತವಾಗಿಯೂ ಇದೆ. ಇವರ ಕ್ರೀಡಾ ಪ್ರತಿಭೆಗೆ ಸಹಕರಿಸುವವರು ಶ್ರೀ ಸುರೇಂದ್ರ ಪೂಜಾರಿ 9036242551, 8970401220 ಅವರನ್ನು ಸಂಪರ್ಕಿಸ ಬೇಕಾಗಿ ವಿನಂತಿ. ಇವನ ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಹಾರೈಸೋಣ…

Write A Comment