ಮನೋರಂಜನೆ

ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್ ಟ್ರೋಫಿಗಾಗಿ ವಿಂಡೀಸ್‌–ಇಂಗ್ಲೆಂಡ್‌ಮಧ್ಯೆ ಇಂದು ಫೈನಲ್ ಹಣಾಹಣಿ ! ಉಭಯ ತಂಡಗಳಿಗೂ ಎರಡನೇ ಪ್ರಶಸ್ತಿ ಮೇಲೆ ಕಣ್ಣು

Pinterest LinkedIn Tumblr

chris-gayle-and-darren-sammy

ಕೋಲ್ಕತ್ತ: ವೆಸ್ಟ್ ಇಂಡೀಸ್ ತಂಡದ ನಾಯಕ ಡರೆನ್ ಸಮಿ ಎದುರು ಈಗ ವಿನೂತನ ದಾಖಲೆ ಬರೆಯುವ ಅವಕಾಶ ಒದಗಿ ಬಂದಿದೆ.

ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್ ಕ್ರಿಕೆಟ್‌ಇತಿಹಾಸದಲ್ಲಿ ಎರಡನೇ ಬಾರಿ ಚಾಂಪಿಯನ್ ಆಗುವ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶ ಅದು. ಭಾನುವಾರ ಈಡನ್‌ಗಾರ್ಡನ್‌ನಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್‌ನಲ್ಲಿ ವಿಂಡೀಸ್ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

2007ರಿಂದ ಇಲ್ಲಿಯವರೆಗೆ ಯಾವುದೇ ತಂಡದ ನಾಯಕ ಈ ಸಾಧನೆ ಮಾಡಿಲ್ಲ. 2014ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿಗೆ ಇಂತಹ ಅವಕಾಶ ಇತ್ತು. ಆದರೆ, ಶ್ರೀಲಂಕಾ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಈ ಬಾರಿ ಫೈನಲ್ ತಲುಪಿ ಅಂತಹ ಸಾಧನೆ ಮಾಡುವ ದೋನಿ ಬಳಗದ ಪ್ರಯತ್ನಕ್ಕೆ ವಿಂಡೀಸ್‌ಅಡ್ಡಗಾಲು ಹಾಕಿತು.

ಮಾರ್ಚ್‌31ರಂದು ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತದ ವಿರುದ್ಧ 7 ವಿಕೆಟ್‌ಗಳಿಂದ ಡರೆನ್ ಸಮಿ ಬಳಗ ಗೆದ್ದಿತ್ತು. ಭಾರತದ ಬೌಲರ್‌ಗಳು ಮಾಡಿದ ಎರಡು ‘ನೋಬಾಲ್‌’ಗಳನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ವಿಂಡೀಸ್ ಬಳಸಿಕೊಂಡಿತ್ತು.

ಇತಿಹಾಸದ ಪುಟ ತಿರುವಿದರೆ, ಚುಟುಕು ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಿಂತ ವಿಂಡೀಸ್ ಹೆಚ್ಚು ಬಲಶಾಲಿ. ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಕೆರೆಬಿಯನ್ ಬಳಗವು 9 ಬಾರಿ ಗೆದ್ದಿದೆ.

2010ರಲ್ಲಿ ಪ್ರಶಸ್ತಿ ಗೆದ್ದಿದ್ದ ಇಂಗ್ಲೆಂಡ್ ಮತ್ತು 2012ರಲ್ಲಿ ಚಾಂಪಿಯನ್ ಆಗಿದ್ದ ವಿಂಡೀಸ್ ತಂಡಗಳು ಈ ಟೂರ್ನಿಯ ಸೂಪರ್ 10 ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಕ್ರಿಸ್‌ಗೇಲ್ ಅಬ್ಬರದ ಶತಕದ ನೆರವಿನಿಂದ ವಿಂಡೀಸ್ ಜಯಶಾಲಿಯಾಗಿತ್ತು.

ಆದರೆ ನಂತರ ಪುಟಿದೆದ್ದ ಇಂಗ್ಲೆಂಡ್ ಎಲ್ಲ ಮೂರು ಪಂದ್ಯಗಳನ್ನೂ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಟೂರ್ನಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಗಳಲ್ಲಿ ಒಂದಾಗಿದ್ದ ನ್ಯೂಜಿಲೆಂಡ್ ಬಳಗವನ್ನು ಸೋಲಿಸಿದ್ದ ಏಯಾನ್ ಮಾರ್ಗನ್ ಬಳಗವು ಫೈನಲ್‌ಗೆ ಪ್ರವೇಶಿಸಿತ್ತು.

ಸಂತಸದಲ್ಲಿ ಸಮಿ ಬಳಗ
ವಿಂಡೀಸ್ ಕ್ರಿಕೆಟ್‌ಮಂಡಳಿಯಲ್ಲಿ ನಡೆದಿದ್ದ ವಿವಾದಗಳಿಂದಾಗಿ ತಂಡವು ಜರ್ಜರಿತವಾಗಿತ್ತು. ವಿಶ್ವ ಟೂರ್ನಿಯಲ್ಲಿ ಭಾಗವಹಿಸುವುದು ಕೊನೆಯ ಹಂತ ದವರೆಗೂ ಖಚಿತವಾಗಿರಲಿಲ್ಲ. ಆದರೆ, ಇದೀಗ ಫೈನಲ್‌ಗೆ ತಲುಪುವ ಮೂಲಕ ತನ್ನ ಸಾಮರ್ಥ್ಯವನ್ನು ಮೆರೆದಿದೆ. ಇದರಿಂದಾಗಿ ತುಂಬು ನಾಯಕ ಡರೆನ್ ಸಮಿ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ.

ಅದಕ್ಕೆ ಸೆಮಿಯಲ್ಲಿ ಗೆದ್ದ ನಂತರ ಡ್ರೆಸ್ಸಿಂಗ್‌ರೂಮ್‌ನಿಂದ (ಬಸ್‌ನಲ್ಲಿ ತೆರಳುವಾಗ) ಹೋಟೆಲ್‌ವರೆಗೂ ಆಟಗಾರರ ನೃತ್ಯ, ವಿಜಯೋತ್ಸವ ಭರ್ಜರಿಯಾಗಿ ನಡೆದಿದ್ದವು. ಆರಂಭಿಕ ಆಟಗಾರ ಕ್ರಿಸ್ ಗೇಲ್, ಚಾರ್ಲ್ಸ್, ಡ್ವೇನ್ ಬ್ರಾವೊ ಮತ್ತು ಭಾರತದ ಎದುರು ಗೆಲುವಿನ ರೂವಾರಿಯಾದ ಲೆಂಡ್ಲ್ ಸಿಮನ್ಸ್ , ಆ್ಯಂಡ್ರೆ ರಸೆಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಾತ್ರ ಇನ್ನಷ್ಟು ಸುಧಾರಣೆಯ ಅವಶ್ಯಕತೆ ಇದೆ.

ಏಕೆಂದರೆ, ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಚಾಣಾಕ್ಷತೆ ಹೊಂದಿದ್ದಾರೆ.
ಸೂಪರ್ 10 ಹಂತದಲ್ಲಿ ದಕ್ಷಿಣ ಆಫ್ರಿಕಾದ ಎದುರು 230 ರನ್‌ಗಳ ಗುರಿಯನ್ನು ಬೆನ್ನತ್ತಿ ಗೆದ್ದ ಇಂಗ್ಲೆಂಡ್‌ಬ್ಯಾಟಿಂಗ್ ಸಾಮರ್ಥ್ಯವನ್ನು ಕಡೆಗಣಿಸು ವಂತಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಜೋ ರೂಟ್, ಜಾಸನ್ ರಾಯ್, ಜಾಸ್ ಬಟ್ಲರ್ ರನ್‌ಗಳ ಹೊಳೆಯನ್ನೇ ಹರಿಸುವ ಸಮರ್ಥರು.
ಬೌಲಿಂಗ್‌ನಲ್ಲಿಯೂ ಇಂಗ್ಲೆಂಡ್ ಒಂದು ಹೆಜ್ಜೆ ಮುಂದಿದೆ. ಡೇವಿಡ್ ವಿಲ್ಲೆ, ಆದಿಸ್ ರಶೀದ್, ಮೋಯಿನ್ ಅಲಿ, ಏಯಾನ್ ಮಾರ್ಗನ್ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರು.

ಭಾರತದ ಎದುರು ವಿಂಡೀಸ್‌ಗೆ ಒಲಿದಂತಹ ’ಅದೃಷ್ಟ’ ಇಂಗ್ಲೆಂಡ್ ಎದುರೂ ಒಲಿಯುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವಾಂಖೆಡೆ ಕ್ರೀಡಾಂಗಣದಂತೆ ಈಡನ್ ಗಾರ್ಡನ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವುದನ್ನೂ ನಿರೀಕ್ಷಿಸುವಂತಿಲ್ಲ. ಆಲ್‌ರೌಂಡ್ ಆಟವಾಡುವವರಿಗೆ ಮಾತ್ರ ಗೆಲುವು ಖಚಿತ ಎಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಿನಲ್ಲಿ ಈ ಎರಡೂ ತಂಡಗಳಲ್ಲಿ ಯಾರೇ ಗೆದ್ದರೂ ವಿಶ್ವ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಎರಡನೇ ಪ್ರಶಸ್ತಿ ಗೆದ್ದ ದಾಖಲೆಯನ್ನು ಬರೆಯುವುದು ಖಚಿತ.
ಕಠಿಣವಾಗಿತ್ತು: ‘ಸೆಮಿಫೈನಲ್‌ವರೆಗಿನ ಹಾದಿ ಕಠಿಣವಾಗಿತ್ತು. ತಂಡದ ಕೆಲವು ಆಟಗಾರರು ತಮ್ಮ ಅಮೋಘ ಫಾರ್ಮ್‌ನಿಂದಾಗಿ ಪಂದ್ಯ ಗೆಲ್ಲಿಸಿದರು. ಪ್ರಶಸ್ತಿ ಎತ್ತಿಹಿಡಿಯಲು ಇನ್ನು ಒಂದು ಹಂತ ಮಾತ್ರ ಬಾಕಿ ಇದೆ’ ಎಂದು ವೆಸ್ಟ್ಇಂಡೀಸ್ ತಂಡದ ನಾಯಕ ಡರೆನ್‌ಸಮಿ ಹೇಳಿದ್ದಾರೆ.

‘ಲೆಂಡ್ಲ್‌ಸಿಮನ್ಸ್‌, ರಸೆಲ್‌, ಚಾರ್ಲ್ಸ್‌ಆಡುವುದನ್ನು ನೋಡಲು ಖುಷಿಯಾಗು ತ್ತದೆ. ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮನೋಭಾವ ಇದ್ದರೆ ಖಂಡಿತಾ ಇಂಗ್ಲೆಂಡ್‌ಎದುರು ನಮಗೆ ಗೆಲುವು ಒಲಿಯುತ್ತದೆ’ ಎಂದು ಅವರು ಹೇಳಿದ್ದಾರೆ.

‘ಇಂಗ್ಲೆಂಡ್ ಅತ್ಯುತ್ತಮ ತಂಡ. ಲೀಗ್‌ಹಂತದಲ್ಲಿ ಅವರು ಉತ್ತ ಮವಾಗಿ ಆಡಿ ಫೈನಲ್‌ತಲುಪಿದ್ದಾರೆ. ಯಾರೇ ಜಯಗಳಿಸಲಿ ಅಂತಿಮವಾಗಿ ಕ್ರಿಕೆಟ್‌ಆಟ ಗೆಲ್ಲಬೇಕು’ ಎಂದು ಸಮಿ ಹೇಳಿದ್ದಾರೆ.
*
ಗೇಲ್‌ವಿಕೆಟ್‌ಮಾತ್ರ ನಮ್ಮ ಗುರಿ ಅಲ್ಲ. ವಿಂಡೀಸ್‌ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡು ತ್ತಾರೆ.ಸಿಮನ್ಸ್‌ವಿಕೆಟ್‌ಕೂಡ ಮುಖ್ಯ.
ಎಯಾನ್‌ಮಾರ್ಗನ್‌
ಇಂಗ್ಲೆಂಡ್ ತಂಡದ ನಾಯಕ
*

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜಾಸನ್ ರಾಯ್, ಅಲೆಕ್ಸ್ ಹೇಲ್ಸ್, ಜೋ ರೂಟ್, ಜಾಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಕ್ರಿಸ್ ಜೊರ್ಡನ್, ಡೇವಿಡ್ ವಿಲ್ಲೇ, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಡಾಸನ್ ರೀಸ್ ಟಾಪ್ಲೆ, ಜೇಮ್ಸ್ ವಿನ್ಸ್.

ವೆಸ್ಟ್ ಇಂಡೀಸ್: ಡರೇನ್ ಸಮಿ (ನಾಯಕ), ಜಾನ್ಸನ್ ಚಾರ್ಲ್ಸ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮನ್ಸ್, ಆ್ಯಂಡ್ರೆ ರಸೆಲ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಡ್ವೇನ್ ಬ್ರಾವೊ, ಕಾರ್ಲೋಸ್ ಬ್ರಾಥ್‌ವೈಟ್, ಸ್ಯಾಮುಯೆಲ್ ಬದ್ರೀ, ಸುಲೇಮನ್ ಬೆನ್, ಜಾಸನ್ ಹೋಲ್ಡರ್, ಜೆರೊಮ್ ಟೇಲರ್, ಆ್ಯಷ್ಲೆ ನರ್ಸ್, ಎವಿನ್ ಲಿವಿಸ್

ಅಂಪೈರ್‌ಗಳು: ಕುಮಾರ ಧರ್ಮಸೇನಾ (ಶ್ರೀಲಂಕಾ), ರಾಡ್ ಟಕರ್ (ಆಸ್ಟ್ರೇಲಿಯಾ)

ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಡಿ.

Write A Comment