ರಿಯಾದ್ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಸೌದಿ ಅರೇಬಿಯಾಕ್ಕೆ ಬಂದಿಳಿದರು. ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹ ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಲಿವೆ.
ಸೌದಿ ದೊರೆ ಸಲ್ಮಾನ್ಬಿನ್ಅಬ್ದುಲ್ಅಜೀಜ್ಅಲ್–ಸೌದ್ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೋದಿ ಪಾಲ್ಗೊಂಡರು. ಈ ಭೇಟಿಯು ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಮಜಲಿಗೆ ಕೊಂಡೊಯ್ಯವ ನಿರೀಕ್ಷೆ ಇದೆ.
ಮೋದಿ ಅವರು ರಾಜ ಸಲ್ಮಾನ್ಅವರೊಂದಿಗೆ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಭಾನುವಾರ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರೂ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ಪ್ರಧಾನಿಯವರು ಆ ಬಳಿಕ ಸೌದಿ ಯುವರಾಜ ಮತ್ತು ಉಪ ಪ್ರಧಾನಿಯಾಗಿರುವ ಮೊಹಮ್ಮದ್ ಬಿನ್ ನೈಫ್ಹಾಗೂ ಉಪ ಯುವರಾಜ ಮತ್ತು ರಕ್ಷಣಾ ಸಚಿವ ಮೊಹಮ್ಮದ್ಬಿನ್ಸಲ್ಮಾನ್ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.