ರಾಷ್ಟ್ರೀಯ

ಸಹೋದರಿಯ ಮೇಲೆ ಸಹೋದರರಿಂದಲೇ ನಿರಂತರ 6 ವರ್ಷ ಅತ್ಯಾಚಾರ

Pinterest LinkedIn Tumblr

rape-2ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಒಡಹುಟ್ಟಿದ ಸಹೋದರರೇ ನಿರಂತರ ಆರು ವರ್ಷಗಳ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.
17 ವರ್ಷದ ತನ್ನ ಸ್ವಂತ ತಂಗಿಯ ಮೇಲೆಯೇ ಕಾಮುಕ ಸಹೋದರರಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾಲ್ವಣಿ ಪೊಲೀಸ್ ಠಾಣೆ ದೂರು ನೀಡಿದ್ದರು, ಆರೋಪಿ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಕುಟುಂಬದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಅವಳ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದಾರೆ. ಆಕೆ ತನ್ನ ಪಾಲಕರು ಮತ್ತು ಇಬ್ಬರು ಸಹೋದರರೊಂದಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ಹಿರಿಯ ಸಹೋದರ (25) ತನ್ನ ತಂಗಿಯನ್ನು ಬೆದರಿಸಿ ಹಾಡಹಗಲೆ ಅವಳ ಮೇಲೆ ಅತ್ಯಾಚಾರವೆಸಗುತ್ತಿದ್ದನು. ತಿಂಗಳ ಹಿಂದಷ್ಟೆ ಮನೆಯಲ್ಲಿ ಈತನ ಕುಕೃತ್ಯವನ್ನು ಕಿರಿಯ ಸಹೋದರ (22) ಗಮನಿಸಿದ್ದಾನೆ. ವಿಷಯವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆವೊಡ್ಡಿದ ಕಿರಿಯ ಸಹೋದರನೂ ತನ್ನ ಕಾಮ ಸುಖಕ್ಕೆ ತಂಗಿಯನ್ನು ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರರ ಕುಕೃತ್ಯದಿಂದ ಬೆಸತ್ತ ಬಾಲಕಿ ತನ್ನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಕುರಿತು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ತಾಯಿ ತನ್ನ ಇಬ್ಬರು ಕಾಮುಕ ಮಕ್ಕಳ ವಿರುದ್ಧ ಮಾಲ್ವಣಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.
ನಾನು 5ನೇ ತರಗತಿಯಲ್ಲಿ ಓದುತ್ತಿರುವಾಗ ಹಿರಿಯ ಸಹೋದರ (25) ನನ್ನ ಮೇಲೆ ಮೊದಲ ಬಾರಿ ಅತ್ಯಾಚಾರವೆಸಗಿದ್ದಾನೆ. ಅಂದಿನಿಂದ ಆತನ ಈ ಕುಕೃತ್ಯ ಮುಂದುವರೆದಿದೆ ಎಂದು ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಸಹೋದರರ ಕುಕೃತ್ಯದಿಂದ ಘಾಸಿಗೊಂಡ ಬಾಲಕಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅಸ್ವಸ್ಥಳಾಗಿದ್ದಾಳೆ. ನಗರದ ಆಸ್ಪತ್ರೆಯೊಂದರಲ್ಲಿ ಅವಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.

Write A Comment