ರಾಷ್ಟ್ರೀಯ

ಬಿಜೆಪಿ ತೊರೆದ ಕ್ರಿಕೆಟಿಗ ನವಜೊತ್ ಸಿದ್ದು ಪತ್ನಿ

Pinterest LinkedIn Tumblr

siddu-wifeಅಮೃತಸರ: ಪೂರ್ವ ಅಮೃತ ಸರ ಬಿಜೆಪಿ ಶಾಸಕಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿದ್ದು ಪತ್ನಿ ನವಜೋತ್ ಕೌರ್ ಸಿದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ.
ಶುಕ್ರವಾರ ಅಂದರೆ ಏಪ್ರಿಲ್ 1 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಏಪ್ರಿಲ್ 1ರಂದು ನವಜೋತ್ ಕೌರ್ ಈ ನಿರ್ಧಾರ ಪ್ರಕಟಿಸಿದ್ದಕ್ಕೆ ಮೊದಲು ಏಪ್ರಿಲ್ ಫೂಲ್ ಮಾಡ್ತಿದ್ದಾರೆ ಎಂದು ನಂಬಿದ್ದರು. ಆದರೆ ಮತ್ತೊಂದು ಪೋಸ್ಟ್ ಹಾಕಿದ ಅವರು ಇದು ಏಪ್ರಿಲ್ ಫೂಲ್ ಅಲ್ಲ. ನಿಜವಾಗಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಪಂಜಾಬ್ ನ ಬಿಜೆಪಿ ಘಟಕದ ಕೆಲ ನಿರ್ಧಾರಗಳಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನೂ ಬಿಜೆಪಿ ತೊರೆದಿರುವ ದಂಪತಿ ಆಮ್ ಆದ್ಮಿ ಪಕ್ಷ ಸೇರುತ್ತಾರೆಂಬಬ ವದಂತಿಗಳು ಹರಡಿವೆ.

Write A Comment