ರಾಷ್ಟ್ರೀಯ

ಪ್ರತಿಯೊಬ್ಬರಿಗೂ ಭಾರತ್ ಮಾತಾಕೀ ಜೈ ಎಂದು ಹೇಳುವ ಹಕ್ಕಿದೆ: ಸ್ಮೃತಿ ಇರಾನಿ

Pinterest LinkedIn Tumblr

irani-newರಾಜ್ ಕೋಟ್: ತಾಯಿನಾಡಿಗಾಗಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ದರೂಲ್ ಉಲೂಮ್ ಡಿಯೋಬಂದ್ ಇಸ್ಲಾಮಿಕ್ ಸಂಘಟನೆ ಭಾರತ್ ಮಾತಾ ಕೀ ಜೈ ಎಂದು ಹೇಳಬಾರದು ಎಂದು ಫತ್ವಾ ಹೊರಡಿಸಿದ ಹಿನ್ನೆಲೆಯಲ್ಲಿ ಇರಾನಿ ಈ ಹೇಳಿಕೆ ನೀಡಿದ್ದಾರೆ.
ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವುದು ಅವರವರ ಭಾವನಾತ್ಮಕ ವಿಷಯ. ಪ್ರತಿಯೊಬ್ಬ ಮಾನವನಿಗೂ ತಾಯಿ ಇಲ್ಲವೇ ತಾಯ್ನಾಡು ಪರ ಮಂತ್ರ ಹೇಳುವ ಹಕ್ಕು ಇದೆ ಎಂದು ತಿಳಿಸಿದ್ದಾರೆ.
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು ಇಸ್ಲಾಂ ಧರ್ಮದ ಸಿದ್ದಾಂತಗಳಿಗೆ ವಿರುದ್ಧವಾಗಿದೆ. ಹೀಗಾಗಿ ಯಾರೊಬ್ಬ ಮುಸಲ್ಮಾನ ಕೂಡ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬಾರದು ಎಂದು ದರೂಲ್ ಉಲೂಮ್ ದಿಯೋಬಾಂಡ್ ಸಂಘಟನೆ ಫತ್ವಾ ಹೊರಡಿಸಿತ್ತು.

Write A Comment