ಮನೋರಂಜನೆ

ರವಿಶಾಸ್ತ್ರಿ ಟೀಂ ಇಂಡಿಯಾದ ನೂತನ ಕೋಚ್ !

Pinterest LinkedIn Tumblr

dhoni

ನವದೆಹಲಿ: ಟೀಂ ಇಂಡಿಯಾದ ನಿರ್ದೇಶಕರಾಗಿರುವ ರವಿಶಾಸ್ತ್ರಿ ಅವರ ನಿರ್ದೇಶಕ ಹುದ್ದೆಯ ಅವಧಿ ಮುಕ್ತಾಯಗೊಂಡಿದ್ದು, ಅವರನ್ನೇ ತಂಡದ ಮುಂದಿನ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂತಹ ಅನುಮಾನಕ್ಕೆ ಕಾರಣವಾಗಿರುವುದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರ ಹೇಳಿಕೆ. ಟಿ20 ವಿಶ್ವಕಪ್‌ನೊಂದಿಗೆ ಟೀಮ್ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಅವರ ಸೇವಾ ಅವಧಿಯ ಒಪ್ಪಂದ ಮುಕ್ತಾಯಗೊಂಡಿದೆ. ರವಿಶಾಸ್ತ್ರಿ ಒಪ್ಪಂದ ನವೀಕರಣ ಮಾಡುವ ಬಗ್ಗೆ ಅಥವಾ ಹೊಸ ಕೋಚ್ ಆಯ್ಕೆ ಮಾಡುವ ಬಗ್ಗೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಇರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ತೀರ್ಮಾನ ತೆಗೆದುಕೊಳ್ಳಲಿದೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಅಂತೆಯೇ ಹಾಗೇನಾದರೂ ರವಿಶಾಸ್ತ್ರಿ ಅವರೊಂದಿಗಿನ ಒಪ್ಪಂದ ನವೀಕರಣವಾದಲ್ಲಿ ನಿರ್ದೇಶಕ ಬದಲು ಕೋಚ್ ಆಗಿ ನೇಮಕವಾಗಲಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ. “ನಾವು ಬಹಳ ಕಾಲದಿಂದ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಇದೇ ವೇಳೆ ನಿರ್ದೇಶಕರಾಗಿ ರವಿಶಾಸ್ತ್ರಿ ಅವರ ಗುತ್ತಿಗೆ ಅಂತ್ಯವಾಗಿದೆ. ಮುಂದೆ ಏನು ಮಾಡುವುದು ಎನ್ನುವುದನ್ನು ಅತ್ಯುನ್ನತ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ನಿರ್ಧಾರ ತೆಗೆದುಕೊಳ್ಳಲಿದೆ. ತಂಡದಲ್ಲಿ ನಿರ್ದೇಶಕ ಮತ್ತು ಕೋಚ್‌ ಎಂಬ ಎರಡೆರಡು ಹುದ್ದೆಗಳಿಗೆ ಅವಕಾಶವಿಲ್ಲ. ರವಿಶಾಸ್ತ್ರಿಯವರ ಗುತ್ತಿಗೆಯನ್ನು ನವೀಕರಿಸಬಹುದು ಎಂದು ಅನುರಾಗ್‌ ಹೇಳಿದ್ದಾರೆ.

ಠಾಕೂರ್ ಅವರ ಈ ಮೇಲಿನ ಹೇಳಿಕೆ ರವಿಶಾಸ್ತ್ರಿಯವರನ್ನು ನಿರ್ದೇಶಕ ಸ್ಥಾನದಿಂದ ಕೋಚ್‌ ಸ್ಥಾನಕ್ಕೆ ಬದಲಾಯಿಸುವ ಪರೋಕ್ಷ ಸುಳಿವನ್ನು ನೀಡಿದೆ. ಟೀಂ ಇಂಡಿಯಾದ ನೂತನ ಕೋಚ್ ನೇಮಕ ವಿಚಾರ ಕುತೂಹಲಕ್ಕೆ ಕಾರಣವಾಗಿದ್ದು, ಒಂದು ವೇಳೆ ಶಾಸ್ತ್ರಿಯವರ ಗುತ್ತಿಗೆಯನ್ನು ಬಿಸಿಸಿಐ ನವೀಕರಿಸಿದರೂ ಅದು ನಿರ್ದೇಶಕರಾಗಿಯಲ್ಲ, ಕೋಚ್‌ ಆಗಿ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಟಿ20 ವಿಶ್ವಕಪ್ ಫೈನಲ್ ಬಳಿಕ ಸಿಎಸಿ ಸಭೆ ಸೇರಲಿದೆ. ಏಪ್ರಿಲ್ 3 ಅಥವಾ ಐಪಿಎಲ್ ಆರಂಭವಾಗುವ ವೇಳೆಗೆ ಸಿಎಸಿ ಸಭೆ ಸೇರಿ ಕೋಚ್ ಕುರಿತಾಗಿ ನಿರ್ಧಾರ ತಿಳಿಸಲಿದೆ.

ರವಿಶಾಸ್ತ್ರಿಯವರು ನಿರ್ದೇಶಕರಾಗಿ ಜವಾಬ್ದಾರಿ ಹೊತ್ತ ಬಳಿಕ ಭಾರತ ಟೆಸ್ಟ್‌ ತಂಡ ವಿಶ್ವ ನಂ.1 ರ್‍ಯಾಂಕ್‌ ಪಡೆಯಿತು. ಟಿ20, ಏಕದಿನದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ನಂತರ ಪೂರ್ಣ ಚೇತರಿಸಿಕೊಂಡು ಟಿ20 ಮಾದರಿ ಕ್ರಿಕೆಟ್ ರ್ಯಾಕಿಂಗ್ ನಲ್ಲಿ ನಂ.1ಸ್ಥಾನ ಪಡೆದಿದೆ. ಇನ್ನು ರವಿ ಶಾಸ್ತ್ರಿ ಅವರ ಬಗ್ಗೆ ತಂಡದ ಆಟಗಾರರಲ್ಲೂ ಒಳ್ಳೆಯ ಅಭಿಪ್ರಾಯವಿದೆ ಎನ್ನಲಾಗಿದೆ.

ಒಟ್ಟಾರೆ 2011ರ ವಿಶ್ವಕಪ್ ಚಾಂಪಿಯನ್ ತಂಡ ಭಾರತದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರ ಬಳಿಕ ಪೂರ್ಣ ಪ್ರಮಾಣದ ಕೋಚ್ ಅಭಾವತೆ ಎದುರಿಸುತ್ತಿದ್ದ ಟೀಂ ಇಂಡಿಯಾಗೆ ರವಿಶಾಸ್ತ್ರಿ ಮುಖಾಂತರವಾಗಿ ಕೋಚ್ ಲಭಿಸುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿವೆ.

Write A Comment