ಮನೋರಂಜನೆ

ಟ್ವಿಟರ್ ಛೀಮಾರಿ; ಭಜ್ಜಿ ಆಯ್ತು ಈಗ ಅಶ್ವಿನ್ ಸರದಿ; ಭಾರತ ಸೋಲುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದಾತನಿಗೆ ಟ್ವಿಟರ್ ನಲ್ಲಿ ಆರ್ ಅಶ್ವಿನ್ ಛೀಮಾರಿ

Pinterest LinkedIn Tumblr

R-ashwin-twitter

ನವದೆಹಲಿ: ಬುಧವಾರವಷ್ಟೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದು ಅಭಿಮಾನಿಯೊಬ್ಬ ಛೀಮಾರಿ ಹಾಕಿಸಿಕೊಂಡ ಘಟನೆ ಹಸಿರಾಗಿರುವಾಗಲೇ ಮತ್ತೊರ್ವ ವ್ಯಕ್ತಿ ಭಾರತೀಯ ಕ್ರಿಕೆಟಿಗನಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ.

ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯವಿದ್ದು, ಇದರ ಹಿನ್ನಲೆಯಲ್ಲಿ ಆರ್ ಅಶ್ವಿನ್ ಅವರಿಗೆ ಟ್ವೀಟ್ ಮಾಡಿರುವ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ, ಇದೇ ನಿಮ್ಮ ಕೊನೆಯ ನಗುವಾಗಲಿದೆ. ವಿಂಡೀಸ್ ನ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ನಿಮ್ಮನ್ನು (ಭಾರತ ತಂಡವನ್ನು) ಧೂಳಿ ಪಟಮಾಡಲಿದ್ದಾನೆ. ನೀನು ಆ ಪಂದ್ಯ ಆಡಬೇಡ ಎಂದು ಅಶ್ವಿನ್ ಅವರ ಕಾಲೆಳೆದಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಅಶ್ವಿನ್, ಬಹುಶಃ ನೀನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿರಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದ್ದಕೆ ಉತ್ತರಿಸಿರುವ ಆತ ಹೌದು ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ಗೇನೆ. ಆದರೆ ನಾಳೆ ಮತ್ತೆ ನೋಡುತ್ತೇನೆ. ಕ್ರಿಸ್ ಗೇಯ್ಲ್ ನಿಮ್ಮನ್ನು ಧೂಳಿಪಟ ಮಾಡುವುದನ್ನು ಮತ್ತು ಸೋಲಿನ ಬಳಿಕ ನಿಮ್ಮ ಪೇಚು ಮೊರೆಯನ್ನು ನಾನು ನೋಡಬೇಕು ಎಂದು ಹೇಳಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಅಶ್ವಿನ್ ನಾಯಿ ಹಿಡಿಯುವ ಗಾಡಿ ಬಂದರೆ ನಿನ್ನನ್ನು ಹಿಡಿದುಕೊಡುತ್ತೇನೆ. ನೀನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕು ಎಂದು ಗುಡುಗಿದ್ದಾರೆ.

ಈ ಟ್ವೀಟ್ ಸರಣಿ ಇದೀಗ ವೈರಲ್ ಆಗಿದ್ದು, ಆ ವಕ್ತಿಯ ಟ್ವೀಟ್ ಗಳಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಲಿ ಚಾಂಪಿಯನ್ ಆಗಿದ್ದುಕೊಂಡು ಲೀಗ್ ಹಂತದಲ್ಲಿಯೇ ನಿನ್ನ ತಂಡ (ಶ್ರೀಲಂಕಾ) ಮುಗ್ಗರಿಸಿದೆ. ಹೀಗಿರುವಾಗ ನೀನು ಹೇಗೆ ಬೇರೆ ತಂಡ ಕುರಿತು ಮಾತನಾಡುತ್ತೀಯಾ ಎಂದು ಅಭಿಮಾನಿಗಳು ಆ ವ್ಯಕ್ತಿಯನ್ನು ಕೆಣಕಿದ್ದಾರೆ.

Write A Comment