ಕನ್ನಡ ವಾರ್ತೆಗಳು

ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿನ ಮರಳು ನೀತಿ ಗೊಂದಲ ಪರಿಹರಿಸಲು ಮಂತ್ರಿ ವಿನಯ್ ಕುಲಕರ್ಣಿಗೆ ಕೋಟಾ ಆಗ್ರಹ.

Pinterest LinkedIn Tumblr
sand_manavi_photo
ಮಂಗಳೂರು,ಮಾ.31: ಕಳೆದ ಜನವರಿ 22ನೇ ತಾರೀಖಿನಿಂದ ಉಡುಪಿ ಜಿಲ್ಲೆಯ ಸಿ‌ಆರ್‌ಝಡ್‌ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆ ‌ಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟು ಮಾಡಿದ್ದು ಜಿಲ್ಲೆಯಲ್ಲಿ‌ ಅಭಿವೃದ್ಧಿ ಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ.
ಮಳೆಗಾಲ ಸನಿಹವಾಗುತ್ತಿದ್ದು ರಸ್ತೆಗಳ ಕೆಲಸವಂತೂ ಮರಳಿಲ್ಲದೇ ನಿಂತುಹೋಗಿದೆ. ಕಾಳಸಂತೆಯಲ್ಲಿ ಮರಳು ಮಾರಾಟವಾಗುತ್ತಿರುವುದರಿಂದ ಬಡವರ ಮನೆಗೆ ಸರಕಾರಕೊಡುವ ಹಣ‌ಒಂದು ಲೋಡು ಮರಳು ಖರೀದಿಸಲು ಸಾಕಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜಿಲ್ಲಾಡಳಿತದ ಎದುರು ಬಿ.ಜೆ.ಪಿ ಪ್ರತಿಭಟನೆ ಮಾಡಿದಾಗಲೂಕೂಡ ಸಮಸ್ಯೆ ಪರಿಹಾರ ವಾಗಿಲ್ಲ. ಸರಕಾರವೇ ಕೊಟ್ಟ ಭರವಸೆಯಂತೆ ಮರಳಿನ ಆತಂಕ ನಿವಾರಣೆ ಮಾಡಿಲ್ಲ. ಆದ್ದರಿಂದ ತಕ್ಷಣ ಸರಕಾರ ಮಧ್ಯ ಪ್ರವೇಶಿಸಬೇಕೆಂದು ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ‌ಅಧ್ಯಕ್ಷ ಹಾಗೂ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಗಣಿ ಮತ್ತು ಭೂ ವಿಜ್ಞಾನ ಮಂತ್ರಿ ವಿನಯಕುಲಕರ್ಣಿಯವರಿಗೆ ವಿಧಾನಸೌಧದಲ್ಲಿ  ಮನವಿ ಸಲ್ಲಿಸಿದರು.
ಜಿಲ್ಲೆಯ ಮರಳಿನ ಗೊಂದಲ ನಿವಾರಣೆಯಾಗದಿದ್ದರೆ ಮತ್ತೊಮ್ಮೆ ಹೋರಾಟ ಮುಂದುವರಿಸುವುದು ನಮಗೆ ಅನಿವಾರ್ಯವಾಗಿದೆ‌ ಎಂದು ಕೋಟಾ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಮಂತ್ರಿ ವಿನಯ ಕುಲಕರ್ಣಿ ಈಗಾಗಲೇ ತಾನು ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

 

Write A Comment