ಮನೋರಂಜನೆ

ಏಪ್ರಿಲ್ 30 ರಂದು ಸಪ್ತಪದಿ ತುಳಿಯಲಿದ್ದಾರೆ ನಟಿ ಬಿಪಾಶಾ ಬಸು

Pinterest LinkedIn Tumblr

bipa

ಮುಂಬಯಿ: ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ತಮ್ಮ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ.

ತಮ್ಮ ಪ್ರೀತಿಯ ಸಂಬಂಧವನ್ನು ಮದುವೆಯಲ್ಲಿ ಮುಂದುವರಿಸಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಎಪ್ರಿಲ್‌ 30 ಕ್ಕೆ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಈ ಇಬ್ಬರೂ ಬಾಲಿವುಡ್‌ ಸ್ಟಾರ್‌ಗಳು ವಿವಾಹ ಬಂಧನಕ್ಕೊಳಗಾಗಲಿದ್ದಾರೆ, ಇನ್ನೂ ಬಿಪಾಶಾ ಮದುವೆಗೆ ಸಾಂಪ್ರಾದಾಯಿಕ ಬಂಗಾಳಿ ವಧುವಿನಂತೆ ಸಿಂಗಾರಗೊಳ್ಳಲಿದ್ದಾರೆ.

ಕರಣ್‌ರ ಮೊದಲ ಪತ್ನಿ ಜೆನಿಫರ್‌ ಜೊತೆಗಿನ ಡೈವೊರ್ಸ್‌ ವಿಚಾರ ಹಾಗೆಯೇ ಉಳಿದಿದ್ದ ಕಾರಣದಿಂದಾಗಿ ಬಿಪಾಶ ಹಾಗೂ ಕರಣ್‌ ತಮ್ಮ ಸಂಬಂಧವನ್ನು ಹಾಗೆಯೇ ಮುಂದುವರಿಸಿದ್ದರು. ಆದರೀಗ ಕರಣ್‌ ಡೈವೊರ್ಸ್‌‌ ವಿಚಾರ ಪರಿಹಾರವಾಗಿದೆ. ಕರಣ್‌ ತಾಯಿ ಪ್ರಾರಂಭದಲ್ಲಿ ಇವರ ರಿಲೇಶನ್‌ಶಿಪ್‌ಗೆ ಸಮ್ಮತಿಸಿಲ್ಲವಾದರೂ ಇದೀಗ ಬಿಪ್ಸ್‌ನ್ನು ತನ್ನ ಸೊಸೆಯಾಗಿ ಒಲ್ಲದ ಮನಸ್ಸಿನಿಂದಲೇ ಸ್ವೀಕರಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ.

Write A Comment