
ಮಂಗಳೂರು : ಮದುವೆಯಾಗಿ ಹಸೆಮನೆ ಸೇರಲು ತಯಾರಿ ನಡೆಸುತ್ತಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ಹಳೆಪೇಟೆಯ ವಿನಾಯಕ ನಗರದಲ್ಲಿ ನಡೆದಿದೆ. ಹಳೆಪೇಟೆಯ ವಿನಾಯಕ ನಗರ ನಿವಾಸಿ ವಿನುತಾ (21) ಎಂಬಾಕೆ ವಾಂತಿ ಮಾಡಿ ಇಂದು ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ವಿನುತಾರಿಗೆ ಮಾ. 31ರಂದು ಪ್ರತಾಪ್ ಎಂಬವರ ಜೊತೆ ಮದುವೆ ನಿಗದಿಯಾಗಿತ್ತು. ಮೂರು ದಿನದ ಹಿಂದೆ ಉಜಿರೆ ಕಾಲೇಜ್ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರು ವಿನುತಾರಿಗೆ ನಿನ್ನ ಮದುವೆಯಾಗುವ ಹುಡುಗ ಪ್ರತಾಪ್ ನಿನಗೆ ದಪ್ಪ ಅಗಲು ಮದ್ದು ಕೊಟ್ಟಿದ್ದಾನೆ ಇದನ್ನು ನೀರಿನ ಜೊತೆ ಕುಡಿಯಬೇಕು ಎಂದು ಹೇಳಿ ತನ್ನಲ್ಲಿದ್ದ ಮದ್ದನ್ನು ನೀಡಿದ್ದರು ಎನ್ನಲಾಗಿದೆ. ವಿನುತಾ ತನ್ನ ಕೆಲಸ ಮಾಡುವ ಸೂಪರ್ ಮಾರ್ಕೆಟ್ ಗೆ ಹೋಗಿ ಅದನ್ನು ಕುಡಿದಿರುವುದಾಗಿ ಆಕೆಯ ಮನೆಯವರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಪೊಲೀಸರ ತನಿಖೆಯಿಂದ ಹಾಗೂ ಮೃತ ಶರೀರದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಗೂಡ ಸಾವಿನ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.