ಅಂತರಾಷ್ಟ್ರೀಯ

ಬ್ರಸಲ್ಸ್ ಸ್ಫೋಟದಲ್ಲಿ ತಮಿಳುನಾಡು ಮೂಲದ ಇನ್ಫೋಸಿಸ್ ಉದ್ಯೋಗಿ ಸಾವು

Pinterest LinkedIn Tumblr

raghavendran

ನವದೆಹಲಿ: ಬೆಲ್ಜಿಯಂ ರಾಜಧಾನಿ ಬ್ರಸಲ್ಸ್ ನಲ್ಲಿ ಮಾರ್ಚ್ 22ರಂದು ನಡೆದ ಸರಣಿ ಸ್ಫೋಟದಲ್ಲಿ ತಮಿಳುನಾಡು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಮೃತಪಟ್ಟಿರುವುದು ದೃಢಪಟ್ಟಿದೆ.

ಬ್ರಸಲ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಘವೇಂದ್ರನ್ ಮೃತಪಟ್ಟಿರುವುದನ್ನು ಖಚಿತಪಡಿಸಿವೆ.

ರಾಘವೇಂದ್ರನ್ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಮ್ ಸ್ಟರ್ ಡಾಂ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಒಯ್ಯಲಾಗುವುದು ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಮಾರ್ಚ್ 22ರಂದು ಬ್ರಸಲ್ಸ್ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ 35ಕ್ಕೂ ಹೆಚ್ಚು ಮಂದಿ ಬಲಿಯಾಗಿ 300 ಅಧಿಕ ಮಂದಿ ಗಾಯಗೊಂಡಿದ್ದರು. ಸ್ಫೋಟದ ನಡೆದ ಬಳಿಕ ರಾಘವೇಂದ್ರನ್ ನಾಪತ್ತೆಯಾಗಿದ್ದರು. ಈಗ ಅವರು ಮೃತಪಟ್ಟಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Write A Comment