ಮನೋರಂಜನೆ

ನಾನು ಶಾಸಕನಾದ ನಂತರವೂ ಕ್ರಿಕೆಟ್ ಆಡುತ್ತೇನೆ: ಶ್ರೀಶಾಂತ್

Pinterest LinkedIn Tumblr

SREESANTH2

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರವೂ ನಾನು ಕ್ರಿಕೆಟ್ ಆಡುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹಾಗೂ ತಿರುವನಂತಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಶ್ರೀಶಾಂತ್ ಅವರು ಹೇಳಿದ್ದಾರೆ.

‘ಕ್ರಿಕೆಟ್ ನನ್ನ ರಕ್ತದಲ್ಲೇ ಇದೆ.ಅವಕಾಶ ಸಿಕ್ಕರೆ ನಾನು ಈಗಲೂ ಬೌಲಿಂಗ್ ಮಾಡುತ್ತೇನೆ. ಮತ್ತೆ ಕ್ರಿಕೆಟ್ ಆಡಬೇಕು ಎಂದು ನಾನು ಬಯಸುತ್ತೇನೆ. ಕ್ರಿಕೆಟ್ ನಿಂದಲೇ ನನ್ನ ವೃತ್ತಿ ಜೀವನ ಆರಂಭವಾಗಿದ್ದು, ಮುಂದೆ ಶಾಸಕನಾದೂ ದೇಶಕ್ಕಾಗಿ ಆಡುತ್ತೇನೆ ಎಂದು ಶ್ರೀಶಾಂತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೀಶಾಂತ್ ಹಾಗೂ ಅಂಕೀತ್ ಚವಾಣ್ ಅವರಿಗೆ ಆಜೀವ ನಿಷೇಧ ಹೇರಿದೆ. ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಅವರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಆದರೂ ಬಿಸಿಸಿಐ ಶ್ರೀಶಾಂತ್ ಮೇಲಿನ ನಿಷೇಧ ಹಿಂಪಡೆದಿಲ್ಲ.

ಇದೇ ವೇಳೆ ಮತ್ತೆ ಕ್ರಿಕೆಟ್ ಗೆ ಮರಳುವುದಕ್ಕಾಗಿಯೇ ರಾಜಕೀಯ ಪ್ರವೇಶಿಸಿದ್ದಾರೆ ಎಂಬ ಆರೋಪವನ್ನು ಶ್ರೀಶಾಂತ್ ತಳ್ಳಿಹಾಕಿದ್ದಾರೆ.

ಮತ್ತೆ ಜನರ ಬಳಿಗೆ ಹೋಗಲು ನನಗೆ ಇದೊಂದು ಉತ್ತಮ ಅವಕಾಶ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜನ ನನ್ನನ್ನು ಬೆಂಬಲಿಸಿದ್ದಾರೆ. ಈಗ ಅವರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ನನಗೆ ಬೆಂಬಲ ನೀಡಿದ ಎಲ್ಲರೂ ಧನ್ಯವಾದ ಎಂದರು.

Write A Comment