ರಾಷ್ಟ್ರೀಯ

ರೈತನ ಶೆಡ್ ನಿಂದ ತಪ್ಪಿಸಿಕೊಂಡು ಕಾಮುಕನ ಕೈಗೆ ಸಿಕ್ಕಿಬಿದ್ದ ಹಸುವಿನ ಮೇಲೆ ಅತ್ಯಾಚಾರ

Pinterest LinkedIn Tumblr

Cow on meadow

ಭೂಪಾಲ್: ಮಾಲೀಕನಿಂದ ತಪ್ಪಿಸಿಕೊಂಡ ಹಸುವೊಂದು ಕಾಮುಕನ ಕೈಯಲ್ಲಿ ಸಿಕ್ಕಿಬಿದ್ದು ಅತ್ಯಾಚಾರಕ್ಕೊಳಗಾಗಿರುವ ಘಟನೆಯೊಂದು ಮಧ್ಯಪ್ರದೇಶದ ಬೆಟುಲ್ ಜಿಲ್ಲೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

ಶ್ರವಣ್ ವ್ಯಾಸ್ (50) ಹಸುವಿನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯಾಗಿದ್ದು, ಮಾಲೀಕನಿಂದ ತಪ್ಪಿಸಿಕೊಂಡು ಹೋಗಿದ್ದ ಹಸುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವೇಳೆ ಸ್ಥಳೀಯ ಮಿಥೇಶ್ ಕುಮಾರ್ ಎಂಬುವವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದರಂತೆ ಪೊಲೀಸರು ಶ್ರವಣ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ವ್ಯಕ್ತಿ ಕುಡಿದ ಅಮಲಿನಲ್ಲಿ ಅಥವಾ ಮಾದಕ ವ್ಯಸನಿಯಾಗಿರಬಹುದೆಂದು ಶಂಕಿಸಿದ್ದೆವು. ಇದರಂತೆ ಪರೀಕ್ಷೆಗೊಳಪಡಿಸಿದಾಗ ವ್ಯಕ್ತಿ ಅಮಲಿನಲ್ಲಿರುವುದಾಗಿ ತಿಳಿದುಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇಂತಹ ಘಟನೆಗಳು ಸ್ಥಳೀಯರ ಗಮನಕ್ಕೆ ಬರುವವರೆಗೂ ವಿಷಯ ಹೊರಗೆ ಬರುವುದಿಲ್ಲ. ಹೀಗಾಗಿ ಆರೋಪಿಗಳ ವಿರುದ್ದ ಪ್ರಾಣಿ ಸಂರಕ್ಷಣೆ ಕಾಯ್ದೆ 1960ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಘಟನೆ ಕುರಿತಂತೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಸೆಕ್ಷನ್ 377ರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ದಾಖಲಾಗುತ್ತವೆ. ಹಸುವನ್ನು ಈಗ ಮಾಲೀಕರ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಹಿಂದೆಯೂ ಇಂತಹದ್ದೇ ಘಟನೆ: ಇನ್ನು 2013ರಲ್ಲೂ ಇಂತಹದ್ದೇ ಘಟನೆಯೊಂದು ಬಲಘಾಟ್ ಜಿಲ್ಲೆಯಲ್ಲಿ ವರದಿಯಾಗಿತ್ತು.. 25 ವರ್ಷದ ವ್ಯಕ್ತಿಯೊಬ್ಬ ಹಸುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ ನೇರವಾಗಿ ಸ್ಥಳೀಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಈ ವೇಳೆ ಆಕ್ರೋಶಗೊಂಡಿದ್ದ ಸ್ಥಳೀಯರು ಆತನನ್ನು ಗಲ್ಲಿಗೇರಿಸಲು ತೀರ್ಮಾನಿಸಿದ್ದರು. ನಂತರ ಪೊಲೀಸರು ಸ್ಥಳೀಯರನ್ನು ತಡೆದು ವ್ಯಕ್ತಿಯ ವಿರುದ್ಧ ಸೆಕ್ಷನ್ 456ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ವ್ಯಕ್ತಿ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದರು. ವಿಚಾರಣೆ ವೇಳೆ ತನ್ನ ದುಃಖವನ್ನು ತೋಡಿಕೊಂಡಿದ್ದ ಯುವಕ, ನನ್ನ ಪತ್ನಿ 1 ವರ್ಷದ ಹಿಂದೆಯೇ ನನ್ನನ್ನು ತೊರೆದು ಹೋಗಿದ್ದಳು. ನನ್ನ ವೈವಾಹಿಕ ಜೀವನದ ಹಕ್ಕನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಹಸುವಿನ ಜೊತೆಗೂಡಿದ್ದೆ ಎಂದು ಹೇಳಿದ್ದ. ಈ ಪ್ರಕರಣ ಸಂಬಂಧ ಬಂಧಿತನಾಗಿದ್ದ ವ್ಯಕ್ತಿ 2 ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ.

Write A Comment