ರಾಷ್ಟ್ರೀಯ

ಹಣ ಪಡೆಯುವಂತೆ ಮತದಾರರಿಗೆ ಪ್ರಚೋದನೆ ಆರೋಪ: ವಿಜಯ್ ಕಾಂತ್ ಪತ್ನಿ ವಿರುದ್ಧ ದೂರು ದಾಖಲು

Pinterest LinkedIn Tumblr

vijayakanth-wifeತಿರುನಲ್ವೇಲಿ: ತಮಿಳುನಾಡಿನ ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಡಿಎಂಕೆಯಿಂದ ಹಣ ಪಡೆದುಕೊಳ್ಳಲು ಮತದಾರರನ್ನು ಪ್ರಚೋದಿಸಿದ್ದಕ್ಕಾಗಿ ಡಿಎಂಡಿಕೆ ಸ್ಥಾಪಕ ವಿಜಯ್ ಕಾಂತ್ ಪತ್ನಿ ಪ್ರೇಮಲತಾ ವಿರುದ್ಧ ದೂರು ದಾಖಲಾಗಿದೆ.
ಪ್ರೇಮಲತಾ ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಮತದಾರರಲ್ಲಿ ವಿರೋಧ ಪಕ್ಷಗಳಿಂದ ಹಣ ಪಡೆದುಕೊಳ್ಳುವಂತೆ ಪ್ರಚೋದಿಸಿದ್ದಾರೆ. ಎಂದು ಸ್ಥಳೀಯ ಎಡಿಎಂಕೆ ಕಾರ್ಯಕರ್ತರು ಪ್ರೇಮಲತಾ ಮಾಡಿದ ಭಾಷಣದ ರೆಕಾರ್ಡ್ ನ್ನು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಇದನ್ನು ಆದರಿಸಿ ಅಧಿಕಾರಿಗಳು ನೀಡಿದ ದೂರಿನನ್ವಯ ಪೊಲೀಸರು ದೂರು ದಾಖಲಿಸಿದ್ದಾರೆ.
ಪ್ರೇಮಲತಾ ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಪರೋಕ್ಷವಾಗಿ ಡಿಎಂಕೆ ಮತ್ತು ಎಡಿಎಂಕೆಯನ್ನು ಉದ್ದೇಶಿಸಿ, ಕೆಲವು ರಾಜಕೀಯ ಪಕ್ಷಗಳು ಪ್ರತಿ ಮತದಾರರಿಗೆ 2ರಿಂದ 3 ಸಾವಿರ ರೂಪಾಯಿ ಹಣ ನೀಡಲು ಮುಂದಾಗಿವೆ. ಆದರೆ ನೀವು ಅಷ್ಟಕ್ಕೇ ಬಿಡಬೇಡಿ. ಒಂದು ವೋಟಿಗೆ ಒಂದು ಲಕ್ಷ ರೂಪಾಯಿ ಕೇಳಿ ಎಂದು ಹೇಳಿರುವ ಮಾತು ದಾಖಲಾಗಿದೆ.
ಪೀಪಲ್ಸ್ ವೆಲ್ಫೇರ್ ಫ್ರಂಟ್ ಮೈತ್ರಿಕೂಟ ಮೇ 16ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ವಿಜಯ್ ಕಾಂತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Write A Comment