ರಾಷ್ಟ್ರೀಯ

ಗುಜರಾತಿನಲ್ಲಿ ರಾಷ್ಟ್ರದ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯ

Pinterest LinkedIn Tumblr

organic-farm-webವಡೋದರ: ಅಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ರೈತರಿಗೆ ಕಲಿಸಿಕೊಡುವ ನಿಟ್ಟಿನಲ್ಲಿ ನೆರವಾಗಲು ರಾಜ್ಯ ಸರ್ಕಾರವು ಸಾವಯವ ಕೃಷಿಯ ಮೇಲೆ ಬೆಳಕು ಚೆಲ್ಲುವಂತಹ ರಾಷ್ಟ್ರದ ಪ್ರಪ್ರಥಮ ಸಾವಯವ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಇಲ್ಲಿ ಹೇಳಿದರು.

ನಗರದ ಹೊರವಲಯದಲ್ಲಿ ಶನಿವಾರ ನಡೆದ ರೈತರ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ, ‘ರೈತರು ಈಗ ಸಾವಯವ ಕೃಷಿ ಪದ್ಧತಿಯತ್ತ ಹೊರಳಬೇಕು. ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಸಲುವಾಗಿ ರಾಷ್ಟ್ರದ ಪ್ರಪ್ರಥಮ ಸಾವಯವ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ’ ಎಂದು ನುಡಿದರು.

ಸಾವಯವ ಕೃಷಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇದನ್ನು ಸಾಧಿಸುವ ಸಲುವಾಗಿ 2016-17ರಲ್ಲಿ ವಿಶ್ವವಿದ್ಯಾಲಯಕ್ಕಾಗಿಯೇ 10 ಕೋಟಿ ರೂಪಾಯಿಗಳ ನಿಧಿಯನ್ನು ತೆಗೆದಿರಿಸಿದೆ ಎಂದು ರಾಜ್ಯ ಕೃಷಿ ಸಚಿವ ಬಾಬುಭಾಯಿ ಬೊಖಿರಿಯಾ ಹೇಳಿದರು.

ವಿಶ್ವವಿದ್ಯಾಲಯವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಗಾಂಧಿನಗರ ಜಿಲ್ಲೆಯ ಕೃಷಿ ಕಾಮಧೇನು ವಿಶ್ವವಿದ್ಯಾಲಯದ ಸಮೀಪದ ನಿವೇಶನವನ್ನು ಆಯ್ಕೆ ಮಾಡಬಹುದು ಎಂದು ಅವರು ನುಡಿದರು.

Write A Comment