ರಾಷ್ಟ್ರೀಯ

ಸಿಯಾಚಿನ್ ನಲ್ಲಿ ಹಿಮಪಾತ: ನಾಪತ್ತೆಯಾಗಿದ್ದ ಮತ್ತೊಬ್ಬ ಯೋಧನ ಪಾರ್ಥಿವ ಶರೀರ ಪತ್ತೆ

Pinterest LinkedIn Tumblr

rai-26

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ ಸೀಯಾಚಿನ್ ನಲ್ಲಿ ಶುಕ್ರವಾರ ಸಂಭವಿಸಿದ ಹಿಮಾಪಾತದಲ್ಲಿ ನಾಪತ್ತೆಯಾಗಿದ್ದ ಮತ್ತೊಬ್ಬ ಯೋಧನ ಮೃತದೇಹ ಶನಿವಾರ ಪತ್ತೆಯಾಗಿದೆ.

ನಿನ್ನೆ ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ಯೋಧರು ನಾಪತ್ತೆಯಾಗಿದ್ದರು. ಆ ಪೈಕಿ ಓರ್ವ ಯೋಧನನ್ನು ನಿನ್ನೆಯೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಾನ್ಸ್ ಹವಿಲ್ದಾರ್ ಭವನ್ ತಮಂಗ್ ಮೃತಪಟ್ಟಿದ್ದರು.

ನಾಪತ್ತೆಯಾಗಿದ್ದ ಮತ್ತೊಬ್ಬ ಯೋಧ ರೈಫಲ್ ಮ್ಯಾನ್ ಸುನಿಲ್ ರೈ ಅವರ ಪಾರ್ಥಿವ ಶರೀರವನ್ನು ಹಿಮದ ರಾಶಿ ಅಡಿಯಿಂದ ಇಂದು ಬೆಳಗ್ಗೆ ಹೊರತೆಗೆಯಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮಗ್ ಅವರು ಪತ್ನಿ, ಆರು ವರ್ಷದ ಮಗ ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ. ರೈ ಅವರು ತಂದೆ, ತಾಯಿ ಹಾಗೂ ಇಬ್ಬರು ಕಿರಿಯ ಸಹೋದರರನ್ನು ಅಗಲಿದ್ದಾರೆ.

Write A Comment