ಜಮ್ಮು-ಕಾಶ್ಮೀರ: ಇಲ್ಲಿನ ಬಿಜ್ಬಹಾರ್ ನಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರಿಗೆ ಗಾಯಗಳಾಗಿದ್ದು ಹತ್ತಿರದ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಮುಕ್ತಗೊಳಿಸುವ ವೇಳೆ ಭಾರತೀಯ ಸೈನಿಕರನ್ನು ಗುರಿಯಾಗಿರಿಸಿ ಉಗ್ರಗಾಮಿಗಳು ಗ್ರೆನೇಡ್ ದಾಳಿ ನಡೆಸಿದ್ದು, ದಾಳಿಗೆ ಇಬ್ಬರು ಸೈನಿಕರು ಸೇರಿ ಒಟ್ಟು ಐವರಿಗೆ ಗಾಯಗಳಾಗಿವೆ ಎಂದು ಹಿರೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿನ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಈಗಾಗಲೇ ಯೋಧರು ಉಗ್ರಗಾಮಿಗಳ ಶೋಧಕಾರ್ಯ ಪ್ರಾರಂಭಿಸಿದ್ದಾರೆ.