ಮನೋರಂಜನೆ

ಶರ್ಮಾ ಜೊತೆ ಡೇಟಿಂಗ್ ನಲ್ಲಿದ್ದಾರಂತೆ “ಪಾಂಡ್ಯಾ”..!

Pinterest LinkedIn Tumblr

hardik-lish

ಕೋಲ್ಕತಾ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ವೀರೋಚಿತ ಗೆಲುವಿಗೆ ಕಾರಣರಾದ ‘ಲಾಸ್ಟ್ ಓವರ್ ಹೀರೋ’ ಗುಜರಾತ್ ಮೂಲದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಲ್ಲಿರುವ ವಿಚಾರ ಬಹಿರಂಗವಾಗಿದೆ.

ಅದೂ ಕೂಡ ಶರ್ಮಾ ಜೊತೆಗೆ.. ಅರೆ ಇದೇನಿದು ವಿರಾಟ್ ಕೊಹ್ಲಿಯ ಗೆಳತಿ ಅನುಷ್ಕಾ ಶರ್ಮಾ ಬ್ರೇಕ್ ಅಪ್ ಬಳಿಕ ಪಾಂಡ್ಯಾ ಜೊತೆಗಿದ್ದಾರೆ ಎಂದು ನೀವು ಊಹಿಸಿದ್ದರೆ ಅದು ತಪ್ಪು. ಏಕೆಂದರೆ ಈ ಶರ್ಮಾ ಆ ಅನುಷ್ಕಾ ಶರ್ಮಾ ಅಲ್ಲ. ಈಕೆ ಕೋಲ್ಕತಾ ಮೂಲದ ರೂಪದರ್ಶಿ ಲಿಶಾ ಶರ್ಮಾ. ಬಾಂಗ್ಲಾ ವಿರುದ್ಧದ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದ ಹಾರ್ದಿಕ್ ಪಾಂಡ್ಯಾ ಕುರಿತ ಮಾಹಿತಿಗಳನ್ನು ಕಲೆಹಾಕುವಲ್ಲಿ ಮಾಧ್ಯಮಗಳು ಬಿಸಿಯಾಗಿದ್ದು, ಅದರ ಪರಿಣಾಮ ಇದೀಗ ಪಾಂಡ್ಯಾ ಗರ್ಲ್ ಫ್ರೆಂಡ್ ವಿಚಾರ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯಾ ಮತ್ತು ಲಿಶಾ ಶರ್ಮಾ ಸಾಕಷ್ಟು ತಿಂಗಳಿಂದವೇ ಡೇಟಿಂಗ್ ನಲ್ಲಿದ್ದಾರೆ ಎಂದು ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. 22 ವರ್ಷದ ಲಿಶಾ ಶರ್ಮಾ ಮೂಲತಃ ಜಮ್ಶೆಡ್‌ಪುರದವರು. ಕೋಲ್ಕತಾದಲ್ಲಿ ರೂಪದರ್ಶಿಯಾಗಿರುವ ಲಿಶಾ ಶರ್ಮಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಾಂಡ್ಯಾ ರತ್ನದಂಥ ವ್ಯಕ್ತಿ, ಶಾಂತ ಹಾಗೂ ಪರ್ಫೆಕ್ಟ್. ನಾನು ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಉತ್ತಮ ಸ್ನೇಹಿತರು’ ಎಂದಿದ್ದಾರೆ.

ಆದರೆ ಅವರಿಬ್ಬರು ಜತೆಯಾಗಿ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಲಗತ್ತಿಸಿರುವ ಸೆಲ್ಫಿ ಫೋಟೊಗೆ ‘ನನ್ನ ಪಂಡಾ ಜತೆ’ಎಂದು ಕ್ಯಾಪ್ಶನ್ ನೀಡಿದ್ದರು. ಒಂದು ವರ್ಷದ ಹಿಂದೆಯೇ ಚಿರಪರಿಚಿತರಾಗಿರುವ ಇವರಿಬ್ಬರು ಇತ್ತೀಚೆಗೆ ತಾಜ್ ಬೆಂಗಾಲ್ ಹೋಟೆಲ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.

ಹಾರ್ದಿಕ್ ನಿಮಗೆ ಸೂಕ್ತ ವ್ಯಕ್ತಿಯೇ ಎಂದು ಕೇಳಿದ್ದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಲಿಶಾ,‘ನೋಡಿ ಈಗ ಭಾರತದ ಬಹುತೇಕ ಹುಡುಗಿಯರು ಆತನೊಂದಿಗೆ ಡೇಟಿಂಗ್ ಮಾಡಲು ಬಯಸಿದ್ದಾರೆ. ಆತನಲ್ಲಿರುವ ವಿಶಿಷ್ಟ ಕ್ರಿಕೆಟ್ ಆ್ಯಟಿಟ್ಯೂಡ್ ಅಭಿಮಾನಿಗಳು ಇಷ್ಟಪಡಲು ಕಾರಣ. ಹೀಗಾಗಿ ಖಂಡಿತಾ ಆತ “ಡೇಟಿಂಗ್ ಮೆಟೀರಿಯಲ್” ಎಂದಿದ್ದಾರೆ. ಆದರೆ ಸದ್ಯ ತಾವಿಬ್ಬರೂ ಸ್ನೇಹಿತರು ಎಂದಿರುವ ಲಿಶಾ ಡೇಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಏನನ್ನೂ ಬಾಯಿ ಬಿಟ್ಟಿಲ್ಲ.

ಇನ್ನು ಬಾಂಗ್ಲಾ ವಿರುದ್ಧ ಕೊನೆಯ ಓವರ್ ವೇಳೆ ಅಷ್ಟೊಂದು ಒತ್ತಡವಿದ್ದರೂ ನಗುನಗುತ್ತಾ ಕೊನೇ ಓವರ್ ಎಸೆದ ಹಾರ್ದಿಕ್ ಜತೆ ರೋಚಕ ಪಂದ್ಯದ ಬಗ್ಗೆ ಮಾತನಾಡಿದ್ದ ಲಿಶಾ, ಆತ ತುಂಬಾ ಶಾಂತ ಸ್ವಭಾವದ ವ್ಯಕ್ತಿ. ಅವನಲ್ಲಿ ನನಗೆ ಅದೇ ಇಷ್ಟವಾಗಿದ್ದು. ಕೊನೇ ಓವರ್ ವೇಳೆ ಆತ ನಗುತ್ತಿದ್ದ. ಆ ಬಗ್ಗೆ ಆತನಲ್ಲಿ ‘ಅಂಥ ಒತ್ತಡದಲ್ಲೂ ನೀನು ಹೇಗೆ ನಗುತ್ತಿದ್ದೆ’ ಎಂದು ಕೇಳಿದ್ದಾಗ, ಆಗ ನಾನು ಒತ್ತಡವನ್ನು ಕಡಿಮೆ ಮಾಡಲು ನಗಲೇಬೇಕಿತ್ತು ಅಂದಿದ್ದ ಎಂದು ಲಿಶಾ ಹೇಳಿದ್ದಾರೆ.

Write A Comment