ಅಂತರಾಷ್ಟ್ರೀಯ

ಬ್ರಸೆಲ್ಸ್ ಭಾರತೀಯರ ನೆರವಿಗೆ ಜೆಟ್ ವಿಶೇಷ ವಿಮಾನ ಸಂಚಾರ

Pinterest LinkedIn Tumblr

jet-airwaysclr

ನವದೆಹಲಿ: ಬ್ರಸೆಲ್ಸ್‌ನಲ್ಲಿ ಉಗ್ರರ ಆತ್ಮಹತ್ಯಾ ದಾಳಿ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗಾಗಿ ಜೆಟ್ ಏರ್‌ವೇಸ್ ಇಂದು ಮೂರು ವಿಶೇಷ ವಿಮಾನಗಳ ಹಾರಾಟ ನಡೆಸಲಿದೆ.

ಗಾಯಗೊಂಡಿರುವ ಭಾರತೀಯರ ರಕ್ಷಣೆಗಾಗಿ ಹಾಗೂ ಸ್ವದೇಶಕ್ಕೆ ಕರೆತರಲು ಬೇಕಾದ ಅನುಕೂಲತೆಗಳನ್ನು ಕಲ್ಪಿಸಲು ಜೆಟ್ ಏರ್‌ವೇಸ್ ಮುಂದಾಗಿದೆ.

ಅದಕ್ಕಾಗಿ ಇಂದು ಅಮೆಸ್ಟರ್‌ಡವ್‌ನಿಂದ ಮುಂಬೈಗೆ ೯W೨೨೭ ವಿಮಾನವನ್ನು ಹಾಗೂ ನವದೆಹಲಿಗೆ ೯W೧೨೨೯ ವಿಮಾನ ಮತ್ತು ಕನೋಟಾದಿಂದ ೯W೧೨೩೦ ವಿಮಾನವನ್ನು ಹಾರಾಟ ನಡೆಸಲಿದೆ ಎಂದು ಜೆಟ್ ಏರ್‌ವೇಸ್ ವಕ್ತಾರ ತಿಳಿಸಿದ್ದಾರೆ.

ಜೆಲ್ಜಿಯಂ ವಿಮಾನ ನಿಲ್ದಾಣವನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದ್ದು, ಜೆಟ್ ಏರ್‌ವೇಸ್ ಯೂರೋಪ್ ಮೂಲಕ ತನ್ನ ಸೇವೆ ಮುಂದುವರೆಸಿದೆ.

Write A Comment