ಮನೋರಂಜನೆ

‘ಟೈಮ್’ ಸಂಭವನಿಯ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ, ಸಾನಿಯಾ, ಪ್ರಿಯಾಂಕ ಚೋಪ್ರಾ

Pinterest LinkedIn Tumblr

45

ನ್ಯೂಯಾರ್ಕ್: ಟೈಮ್ ಮ್ಯಾಗಝಿನ್ ಸಿದ್ಧಪಡಿಸಿರುವ ವಾರ್ಷಿಕ ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಸಂಭವನಿಯರ ಪಟ್ಟಿಯಲ್ಲಿ ನರೇಂದ್ರ ಮೋದಿ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಸ್ಥಾನಪಡೆದಿದ್ದಾರೆ.

ಟೈಮ್ ಮ್ಯಾಗಝಿನ್ ಮುಂದಿನ ತಿಂಗಳು ವಿಶ್ವದ 100 ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಆನ್‌ಲೈನ್ ಚುನಾವಣೆ ಮೂಲಕ ಓದುಗರಿಂದ ಆಯ್ಕೆ ಮಾಡಿರುವ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಮ್ಯಾಗಝಿನ್ ಸಿದ್ಧಪಡಿಸುತ್ತಿದೆ.

ಕಳೆದು ವರ್ಷ ವಿಶ್ವವನ್ನು ಉನ್ನತಿಗೆ ಅಥವಾ ಅವನತಿಗೆ ಒಯ್ಯುವಲ್ಲಿ ಪಾತ್ರವಹಿಸಿರುವ ರಾಜಕೀಯ, ಮನೋರಂಜನೆ, ಉದ್ಯಮ, ತಂತ್ರಜ್ಞಾನ, ವಿಜ್ಞಾನ, ಧರ್ಮ ಮತ್ತು ಇತರ ಯಾವುದೇ ಪ್ರಮುಖ ಕ್ಷೇತ್ರಗಳ ವ್ಯಕ್ತಿಗಳಿಗೆ ಆನ್‌ಲೈನ್‌ನಲ್ಲಿ ಮತ ಹಾಕುವಂತೆ ಟೈಮ್ಸ್‌ ಸಂಪಾದಕರು ಓದುಗರನ್ನು ಕೇಳಿಕೊಂಡಿದ್ದರು.

Write A Comment