ಅಂತರಾಷ್ಟ್ರೀಯ

‘ನಗ್ನ ನೃತ್ಯ’ ಖ್ಯಾತಿಯ ಪಾಕ್ ನಟಿ ಕಂದೀಲ್ ನಿಂದ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ!

Pinterest LinkedIn Tumblr

Virat Kohli- Qandeel Baloch

ಲಾಹೋರ್: ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತವನ್ನು ಸೋಲಿಸಿದರೆ ತಾನು ನಗ್ನ ನೃತ್ಯ ಮಾಡುತ್ತೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಪಾಕ್ ಮಾಡೆಲ್ ಕಂದೀಲ್ ಬಲೋಚ್ ಇದೀಗ ವಿರಾಟ್ ಕೊಹ್ಲಿಗೆ ಗಾಳ ಹಾಕತೊಡಗಿದ್ದಾಳೆ.

ಶಾಹಿದ್ ಅಫ್ರೀದಿಯ ಅಭಿಮಾನಿಯಾಗಿದ್ದ ಕಂದೀಲ್ ಭಾರತದೊಂದಿಗೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರಾಭವಗೊಂಡ ನಂತರ, ಟೀಂ ಇಂಡಿಯಾದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಯತ್ತ ಕಣ್ಣು ಹಾಕಿದ್ದಾಳೆ.

ಇತ್ತೀಚೆಗಷ್ಟೇ ನಟಿ ಅನುಷ್ಕಾ ಶರ್ಮಾಳ ಜತೆ ಲವ್ ಬ್ರೇಕಪ್ ಆಗಿರುವ ವಿರಾಟ್ ಕೊಹ್ಲಿಗೆ ಕಂದೀಲ್ ಟ್ವಿಟರ್ನಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ. ಸುದ್ದಿಯ ಹಪಾಹಪಿಯಲ್ಲಿರುವ ಕಂದೀಲ್ ಬ್ಯಾಕ್ ಟು ಬ್ಯಾಕ್ ವೀಡಿಯೋಗಳನ್ನು ಹಾಕಿ ಜನರ ಗಮನ ಸೆಳೆಯುತ್ತಿದ್ದು, ಇದೀಗ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿ ಮತ್ತೆ ಸುದ್ದಿಯಾಗಿದ್ದಾಳೆ.

Write A Comment