ರಾಷ್ಟ್ರೀಯ

ಬಾಲಿವುಡ್ ಬಿಗ್ ಬಿ ವಿರುದ್ಧ ಕೇಸ್ ದಾಖಲು

Pinterest LinkedIn Tumblr

bigದೆಹಲಿ: ಐಸಿಸಿ ಟಿ20 ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಬಿಗ್ ಬಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆ ಎಂಬ ಇನ್ನೊಂದು ಆರೋಪ ಕೇಳಿಬರುತ್ತಿದೆ.

ರಾಷ್ಟ್ರಗೀತೆ ಆಲಾಪನೆಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರು. 4 ಕೋಟಿ ಪಡೆದಿದ್ದರು ಎಂಬ ಆರೋಪ ಕೇಳಿ ಬಂದು ವಿವಾದ ಸೃಷ್ಟಿಯಾದಾಗ, ಅವರು ಇದಕ್ಕಾಗಿ ನಯಾ ಪೈಸೆ ಪಡೆದಿಲ್ಲ ಎಂದು ಸಿಎಬಿ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಆ ವಿವಾದ ಅಂತ್ಯಕಂಡಿತ್ತು.

ಇದೀಗ ಅಮಿತಾಬ್ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆ. ಹಾಗೂ 52 ಸೆಕೆಮಡ್ ಇರುವ ಗೀತೆಯನ್ನು ಬಿಗ್ ಬಿ ಕೇವಲ 1 ನಿ. 22 ಸೆಕೆಂಡಿನಲ್ಲಿ ಹಾಡಿ ಮುಗಿಸಿದ್ದಾರೆ ಎಂಬಂತಹ ಹೊಸ ಆರೋಪಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಅಶೋಕ್ ನಗರ್ ಪೊಲೀಸ್ ಠಾಣೆಯಲ್ಲಿ ಅಮಿತಾಬ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದೆ.

Write A Comment