ಅಂತರಾಷ್ಟ್ರೀಯ

ಬ್ರಸೆಲ್ಸ್‌ ಸ್ಫೋಟ ಖಂಡನೀಯ: ಮೋದಿ, ಸುಷ್ಮಾ ಟ್ವೀಟ್

Pinterest LinkedIn Tumblr

Narendra-Modi-Sushma-Swaraj

ನವದೆಹಲಿ(ಪಿಟಿಐ): ಬ್ರಸೆಲ್ಸ್‌ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಬೆಲ್ಜಿಯಂ ರಾಜಧಾನಿಯಲ್ಲಿ ನಡೆದಿರುವ ಈ ಆತ್ಮಾಹುತಿ ದಾಳಿಯು ಖಂಡನೀಯ. ದಾಳಿಯಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಅವರು ಹೇಳಿದ್ದಾರೆ. ಮುಂದಿನ ವಾರ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಭಾರತ–ಯುರೋಪ್ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿಯೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಬ್ರಸೆಲ್ಸ್‌ ಸ್ಫೋಟದಲ್ಲಿ ಭಾರತೀಯರು ಯಾರೊಬ್ಬರು ಮೃತಪಟ್ಟಿಲ್ಲ, ಯಾರೂ ಆತಂಕ ಪಡಬೇಕಿಲ್ಲ, ಭಾರತೀಯ ರಾಯಭಾರಿ ಕಚೇರಿ ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.

Write A Comment