ಅಂತರಾಷ್ಟ್ರೀಯ

ಬ್ರಸಲ್ಸ್ ಸ್ಫೋಟ; ಭಾರತೀಯ ಮಹಿಳೆಗೆ ಗಾಯ

Pinterest LinkedIn Tumblr

brussels-airport4

ನವದೆಹಲಿ: ಬ್ರಸಲ್ಸ್ ವಿಮಾನನಿಲ್ದಾಣದಲ್ಲಿ ಮಂಗಳಾವಾರ ಬೆಳಗ್ಗೆ ನಡೆದ ಬಾಂಬ್ ಸ್ಫೋಟದಲ್ಲಿ ಜೆಟ್ ಏರ್ವೇಸ್ ನ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

“ಬ್ರಸಲ್ಸ್ ನ ಭಾರತೀಯ ರಾಯಭಾರಿ ಮಂಜೀವ್ ಪುರಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಇಲ್ಲಿಯವರೆಗೆ ಯಾವ ಭಾರತೀಯ ನಾಗರಿಕರಿಗೂ ಸಾವುಂಟಾದ ವರದಿಗಳಿಲ್ಲ” ಎಂದು ಸುಷ್ಮಾ ಟ್ವೀಟ್ ಮಾಡಿದ್ದರೆ.
“ಆದರೆ ಜೆಟ್ ಏರ್ವೇಸ್ ನ ಮಹಿಳಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮತ್ತೊಂದು ಟ್ವೀಟ್ ನಲ್ಲಿ ಸುಷ್ಮಾ ಹೇಳಿದ್ದಾರೆ.

“ದಯವಿಟ್ಟು ಚಿಂತಿಸಬೇಡಿ. ಬ್ರಸಲ್ಸ್ ನ ಭಾರತೀಯ ರಾಯಭಾರಿ ಕಚೇರಿ ಎಲ್ಲ ಅಗತ್ಯ ನೆರವುಗಳನ್ನು ನೀದಲಿದೆ” ಎಂದು ಕೂಡ ಅವರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಬ್ರಸಲ್ಸ್ ನ ಜ್ಯಾವೆಂಟಮ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ೧೩ ಜನರು ಮೃತಪಟ್ಟಿದ್ದಾರೆ.

Write A Comment