ರಾಷ್ಟ್ರೀಯ

ತೆರಿಗೆಗಳ್ಳರ ಸ್ವರ್ಗದಲ್ಲಿರುವ ಭಾರತೀಯರ ಕಪ್ಪು ಹಣ 181 ಬಿಲಿಯನ್ ಡಾಲರ್‌

Pinterest LinkedIn Tumblr

BLACK-21ನವದೆಹಲಿ: ತೆರಿಗೆ ವಂಚಿಸಿ ವಿದೇಶಗಳಲ್ಲಿ ಭಾರತೀಯರು ಅಕ್ರಮವಾಗಿ ಸಂಗ್ರಹಿಸಿರುವ ಕಪ್ಪು ಹಣ ಮತ್ತು ಆಸ್ತಿಗಳ ಪ್ರಮಾಣ ಈಗ 181 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ವರದಿ ಮಾಡಲಾಗಿದೆ.
ಭಾರತೀಯರು ವಿದೇಶಗಳಲ್ಲಿ ಸಂಗ್ರಹಿಸಿರುವ ಕಪ್ಪು ಹಣದ ಪ್ರಮಾಣವು ಅಂದಾಜು 152 ರಿಂದ 181 ಶತಕೋಟಿ ಡಾಲರ್‌ ಆಗಿದೆ ಎಂದು ಬ್ಯಾಂಕ್‌ ಆಫ್ ಇಟಲಿಯ ಹಿರಿಯ ಅರ್ಥ ಶಾಸ್ತ್ರಜ್ಞರೊಬ್ಬರು ಹೇಳಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.
181 ಶತಕೋಟಿ ಡಾಲರ್‌ಗಳ ಕಪ್ಪು ಹಣದ ಅಂದಾಜು ಕೇವಲ ನಗದು ಠೇವಣಿಗೆ ಸಂಬಂಧಿಸಿದ್ದಾಗಿದೆ. ಆದರೆ ವಿದೇಶಗಳಲ್ಲಿ ಭಾರತೀಯರು ಅಕ್ರಮವಾಗಿ ಸಂಗ್ರಹಿಸಿರುವ ಸೊತ್ತುಗಳ ಪ್ರಮಾಣವನ್ನು ಅಂದಾಜಿಸಲು ಅಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಭಾರತೀಯರು ತಮ್ಮ ಕಪ್ಪು ಹಣದ ಮೂಲಕ ವಿದೇಶಗಳಲ್ಲಿ ಅಪಾರ ಪ್ರಮಾಣದ ರಿಯಲ್‌ ಎಸ್ಟೇಟ್‌, ಚಿನ್ನ ಮತ್ತು ಕಲಾಕೃತಿಗಳನ್ನು ಖರೀದಿಸಿದ್ದಾರೆ ಎಂದು ಶಾಸ್ತ್ರಜ್ಞರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ತಿಂಗಳಷ್ಟೇ ದೇಶದೊಳಗೆ ಅಕ್ರಮವಾಗಿ ಕಪ್ಪು ಹಣ ಹೊಂದಿರುವವರು ಶೇ.90 ತೆರಿಗೆಯನ್ನು ಕಟ್ಟಿ, ನಾಲ್ಕ ತಿಂಗಳೊಳಗೆ ತಮ್ಮಲ್ಲಿನ ಕಪ್ಪು ಹಣ ಹಾಗೂ ಆಕ್ರಮ ಆಸ್ತಿಪಾಸ್ತಿಯನ್ನು ಘೋಷಿಸಿಕೊಳ್ಳದಿದ್ದರೆ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು 2016-17ರ ಸಾಲಿನ ಬಚೆಟ್‌ನಲ್ಲಿ ಕಪ್ಪುಹಣ ಘೋಷಣೆಗೆ ನೀಡಿರುವ ನಾಲ್ಕು ತಿಂಗಳ ಕಾಲಾವಕಾಶವು ಜೂನ್‌ 1ರಿಂದ ಆರಂಭಗೊಳ್ಳುತ್ತದೆ. ಕಪ್ಪುಹಣದ ಮೇಲೆ ಶೇ.30ರ ತೆರಿಗೆ ಮತ್ತು ಶೇ.15ರ ದಂಡವನ್ನು ಪಾವತಿಸಿ ಕಾನೂನು ಕ್ರಮದಿಂದ ಪಾರಾಗುವ ಆವಕಾಶವನ್ನೂ ಸರ್ಕಾರ ಕಲ್ಪಿಸಿದೆ.

Write A Comment