ರಾಷ್ಟ್ರೀಯ

24ರಿಂದ 4 ದಿನ ಬ್ಯಾಂಕ್‌ ರಜೆ

Pinterest LinkedIn Tumblr

bankwebನವದೆಹಲಿ (ಪಿಟಿಐ): ಮಾರ್ಚ್‌ 24 ರಿಂದ 4 ದಿನ ಬ್ಯಾಂಕುಗಳಿಗೆ ಸರಣಿ ರಜೆ ಇರುವುದರಿಂದ ಗ್ರಾಹಕರು ಶಾಖೆಗಳಿಗೆ ತೆರಳಿ ವಹಿವಾಟು ನಡೆಸಲು ಸಾಧ್ಯವಿಲ್ಲ.
ಮಾರ್ಚ್‌ 24 ಗುರುವಾರ ಹೋಳಿ ನಿಮಿತ್ತ ರಜೆ, 25ರಂದು ಶುಭ ಶುಕ್ರವಾರ, ಮಾರ್ಚ್‌ 26 ತಿಂಗಳ ನಾಲ್ಕನೇ ಶನಿವಾರದ ರಜೆ ಮತ್ತು ಭಾನುವಾರ ವಾರಾಂತ್ಯದ ರಜೆ. ಈ ದಿನಗಳಲ್ಲಿ ಬ್ಯಾಂಕ್‌ ಶಾಖೆಗಳು ತೆರೆದಿರುವುದಿಲ್ಲ. ಆದರೆ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ಈ ವೇದಿಕೆಯಡಿ ವಹಿವಾಟು ನಡೆಸಬಹುದು ಎಂದು ಬ್ಯಾಂಕುಗಳ ಪ್ರಕಟಣೆ ತಿಳಿಸಿದೆ.
ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆಯ ಶನಿವಾರದಂದು ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಮಾರ್ಚ್‌ ತಿಂಗಳಲ್ಲಿ 4ನೇ ಶನಿವಾರವೂ (ಮಾ.26) ಬಂದಿರುವುದರಿಂದ ಬ್ಯಾಂಕ್‌ ನೌಕರರಿಗೆ 4 ದಿನ ಸರಣಿ ರಜೆ ಲಭಿಸಿದೆ.
ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಬ್ಯಾಂಕುಗಳು ಹೇಳಿವೆ. ಎಟಿಎಂ ಯಂತ್ರಗಳಲ್ಲಿ ಸಾಕಷ್ಟು ನಗದು ಲಭ್ಯತೆಗೆ ಕ್ರಮ ಕೈಗೊಳ್ಳಲಾಗಿದೆ. ₹500, ಸಾವಿರ ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಎಟಿಎಂ ಯಂತ್ರಕ್ಕೆ ತುಂಬಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬ್ಯಾಂಕ್‌ ನೌಕರರು ಬಂದ್‌ಗೆ ಕರೆ ನೀಡಿರುವುದರಿಂದ ಐಡಿಬಿಐ ಬ್ಯಾಂಕ್‌ ಮಾರ್ಚ್‌ 28ರಂದು ಅಂದರೆ ಸೋಮವಾರವೂ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Write A Comment