ರಾಷ್ಟ್ರೀಯ

ದೆಹಲಿ: ಮುಂದುವರಿದ ಚಿನ್ನಾಭರಣ ವರ್ತಕರ ಪ್ರತಿಭಟನೆ; ಬೆಂಗಳೂರು, ಚೆನ್ನೈನಲ್ಲಿ ವ್ಯಾಪಾರ ಪುನರಾರಂಭ

Pinterest LinkedIn Tumblr

goldನವದೆಹಲಿ(ಪಿಟಿಐ): ಚಿನ್ನಾಭರಣಗಳ ಮೇಲೆ ಶೇ 1ರಷ್ಟು ಅಬಕಾರಿ ಸುಂಕ ವಿಧಿಸಿರುವುದನ್ನು ವಿರೋಧಿಸಿ, ವರ್ತಕರು ನಡೆಸುತ್ತಿದ್ದ ಪ್ರತಿಭಟನೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಮಧ್ಯಸ್ಥಿಕೆಯಿಂದ ಶನಿವಾರ ಕೊನೆಗೊಂಡಿತ್ತು.
ಆದರೆ, ದೆಹಲಿ, ಮುಂಬೈ, ರಾಜಸ್ತಾನ ಸೇರಿದಂತೆ ದೇಶದ ಹಲವೆಡೆ ಸೋಮವಾರವೂ ಕೆಲವು ವರ್ತಕರ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ. ಸರ್ಕಾರ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸಂಪೂರ್ಣವಾಗಿ ವಾಪಾಸ್‌ ಪಡೆಯುವುದಾಗಿ ಹೇಳುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಅಖಿಲ ಭಾರತ ಸರಾಫ ಸಂಘಟನೆಯ ಉಪಾಧ್ಯಕ್ಷ ಸುರಿಂದರ್‌ ಕುಮಾರ್‌ ಜೈನ್‌ ಹೇಳಿದ್ದಾರೆ.
ಬೆಂಗಳೂರು, ದೆಹಲಿಯಲ್ಲಿ ಚಿನ್ನಾಭರಣ ಮಳಿಗೆಗಳು ಸೋಮವಾರದಿಂದ ಮತ್ತೆ ವಹಿವಾಟು ಆರಂಭಿಸಿವೆ.
ಚಿನ್ನಾಭರಣ ವರ್ತಕರ ಪ್ರಮುಖ ಸಂಘಟನೆಗಳಾದ ಆಲ್‌ ಇಂಡಿಯಾ ಜೆಮ್ಸ್‌ ಅಂಡ್‌ ಜ್ಯುವೆಲರಿ ಟ್ರೇಡ್‌ ಫೆಡರೇಷನ್‌ (ಜಿಜೆಎಫ್‌), ಇಂಡಿಯ ಬುಲಿಯನ್‌ ಅಂಡ್‌ ಜ್ಯುವೆಲರ್ಸ್‌ ಅಸೋಸಿಯೇಷನ್‌ (ಐಬಿಬಿಜೆ) ಮತ್ತು ಜೆಮ್ಸ್‌ ಜ್ಯುವೆಲರಿ ಎಕ್ಸ್‌ಫೋರ್ಟ್‌ ಪ್ರಮೋಷನ್‌ ಕೌನ್ಸಿಲ್‌, ಜೇಟ್ಲಿ ಜತೆಗೆ ಶನಿವಾರ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೈಬಿಡಲು ನಿರ್ಧರಿಸಿದ್ದವು.

Write A Comment