ಮನೋರಂಜನೆ

ಟೀಂ ಇಂಡಿಯಾ ಗೆಲುವು: ಗಾಬರಿಯಾದ ಧೋನಿ ಪತ್ನಿ ಸಾಕ್ಷಿ..!

Pinterest LinkedIn Tumblr

dho

ರಾಂಚಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೊಳಗಿತ್ತು. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮಾತ್ರ ನಿಜಕ್ಕೂ ಗಾಬರಿ ಬಿದ್ದಿದ್ದರು.

ಅರೆ ಟೀಂ ಇಂಡಿಯಾ ಗೆದ್ದರೆ ಸಂತೋಷಪಡಬೇಕಿದ್ದ ಸಾಕ್ಷಿ ಏಕೆ ಗಾಬರಿಯಾದರು ಆ ಎಂದು ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಅವರ ಪುತ್ರಿಯಂತೆ. ಟೀಂ ಇಂಡಿಯಾ ಅತ್ತ ಕೋಲ್ಕತಾದಲ್ಲಿ ಪಾಕಿಸ್ತಾನದ ಬೇಟೆಯಲ್ಲಿ ತಲ್ಲೀನವಾಗಿದ್ದರೆ, ಇತ್ತ ಧೋನಿ ಪುತ್ರಿ ಝೀವಾ ಧೋನಿ ಆಗತಾನೆ ನಿದ್ರೆಗೆ ಜಾರಿದ್ದಳಂತೆ. ಇನ್ನು ಅತ್ತ ಭಾರತ ತಂಡ ಗೆಲುವಿನ ಸನಿಹ ಸಾಗುತ್ತಿದ್ದಂತೆಯೇ ಇತ್ತ ಮಹೇಂದ್ರ ಸಿಂಗ್ ಧೋನಿ ಅವರ ರಾಂಚಿ ನಿವಾಸದ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದರಂತೆ. ಇದೇ ಧೋನಿ ಪತ್ನಿ ಸಾಕ್ಷಿ ಅವರು ಗಾಬರಿಗೆ ಕಾರಣವಂತೆ.

ಪಟಾಕಿ ಮತ್ತು ಘೋಷಣೆಗೆ ಬೆಚ್ಚಿ ಬಿದ್ದ ಸಾಕ್ಷಿ
ಇನ್ನು ಅತ್ತ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ದಾಖಲಿಸುತ್ತಿದ್ದಂತೆಯೇ ರಾಂಚಿಯಲ್ಲಿರುವ ಧೋನಿ ಮನೆ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇನ್ನು ಧೋನಿ ಮನೆ ಒಳಗೆ ಮಲಗಿದ್ದ ಧೋನಿ ಪುತ್ರಿ ಝೀವಾ ಎಲ್ಲಿ ಗಾಬರಿಯಾಗುತ್ತಾಳೋ ಎಂಬ ಭಯದಿಂದ ಸಾಕ್ಷಿ ಅಭಿಮಾನಿಗಳಲ್ಲಿ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದರಂತೆ. ಆದರೆ ಸಾಕ್ಷಿ ಮಾತನ್ನು ಅಲಕ್ಷಿಸಿದ ಅಭಿಮಾನಿಗಳು ತಮ್ಮ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದರಂತೆ. ಒಟ್ಟಾರೆ ಟೀಂ ಇಂಡಿಯಾ ಗೆಲುವು ಇಡೀ ದೇಶಕ್ಕೆ ಖುಷಿ ನೀಡಿದ್ದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿಗೆ ಗಾಬರಿ ತರಿಸಿದ್ದಂತೂ ಸತ್ಯ.

Write A Comment