ಕನ್ನಡ ವಾರ್ತೆಗಳು

ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಷನ್ ಕಾರ್ಯಾರಂಭ

Pinterest LinkedIn Tumblr

Mahila_makkala_ilake_1

ಮಂಗಳೂರು,ಮಾ.21: ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಷನ್ ಎಂಬ ಸಮಾಜ ಸೇವಾ ಸಂಸ್ಥೆಯು ಫೆ.11ರಂದು ನೊಂದವಣೆಯಾಗಿದು,ಇದು ಶೋಷಿತ ಮಹಿಳೆಯರ, ಮಂಗಳಮುಖಿಯರ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಹಾಗೂ ಅವರು ಸ್ವಾವಲಂಬನೆಯಿಂದ ಬದುಕಲು ಸಹಕಾರಿಯಾಗುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಶ್ರೀವಿದ್ಯಾ ಹೇಳಿದ್ದಾರೆ.

ನಗರದ ವುಡ್ ಲ್ಯಾಂಡ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಷನ್ ಇದರ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಷನ್ ಅಡಿಯಲ್ಲಿ ನಿರಾಶಿತ ಹಿರಿಯ ನಾಗರಿಕರ, ಮಕ್ಕಳ ಮತ್ತು ಮಹಿಳೆಯಗಾಗಿ ಆರೈಕೆ ಹಾಗೂ ಪುನರ್ವಸತಿ, ಗುಡಿಕೈಗಾರಿಕೆ, ಸಂಗೀತ ತರಬೇತಿ ನೀಡುವ ಶ್ರೀಹರಿ ಆಸರೆ ಎಂಬ ಸ್ವದ್ಯೋಗ ಕೂಡ ಸ್ಥಾಪಿಸಲಾಗಿದೆ . ಇದು ಶೋಷಿತ ಮಹಿಳೆಯರು, ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು, ಮಂಗಳಮುಖಿಯರಿಗೆ ಆಶ್ರಯವಾಗಲಿದೆ ಎಂದರು.

Mahila_makkala_ilake_2 Mahila_makkala_ilake_3 Mahila_makkala_ilake_4 Mahila_makkala_ilake_5 Mahila_makkala_ilake_6 Mahila_makkala_ilake_7

ಸಂಘದ ಟ್ರಸ್ಟಿ ಮಂಗಳಮುಖಿ ಶ್ರೀನಿಧಿ ಈ ಸಂಧರ್ಭದಲ್ಲಿ ಮಾತನಾದಿ, ನಮಗೆ ರೇಷನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್ ನೀಡಲಾಗುತ್ತಿಲ್ಲ. ಸ್ವ ಉದ್ಯೋಗ ಮಾಡಲು ಕೂಡ ನಮಗೆ ಸರಿಯಾದ ವಾತಾವರಣ ನಿರ್ಮಾಣವಾಗಿಲ್ಲ. ಈ ಬಗ್ಗೆ ಸರಕಾರ ಗಮನಹರಿಸಬೇಕಾಗಿದ್ದು, ನಮಗೆ ಗುಡಿಸುವ ಕೆಲಸವಾದರೂ ನೀಡಲಿ. ಆ ಮೂಲಕ ನಮ್ಮನ್ನೂ ಬದುಕಲಿ ಬಿಡಿ ಎಂದ ಅವರು ಹೇಳಿದರು.

ಸಂಸ್ಥೆಯ ಗೌರವಾಧ್ಯಕ್ಷೆ ವಿನಯ ಹರೀಶ್, ಟ್ರಸ್ಟಿಗಳಾದ ಮಲ್ಲಿಕಾ, ನಂದಾ ಪಾಯಸ್, ಹರೀಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Write A Comment