ರಾಷ್ಟ್ರೀಯ

ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ಪ್ರಕರಣ ಹೆಚ್ಚಳ ! ನಾಗರಿಕರಲ್ಲಿ ಆತಂಕ

Pinterest LinkedIn Tumblr

rape

ನವದೆಹಲಿ: ದೇಶದಲ್ಲಿ ಶಾಲೆಗಳಿಗೆ ಹೋಗುವ ಪ್ರತಿಯೊಬ್ಬ ಹೆಣ್ಣು ಮಗಳು ಒಂದಲ್ಲಾ ಒಂದು ರೀತಿಯ ಕಿರುಕುಳಕ್ಕೆ ಒಳಗಾಗುತ್ತಿರುವುದು ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಪತ್ರಿಕೆಯೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಹೆಣ್ಣು ಮಕ್ಕಳು ಅನುಭವಿಸಿದ ತೊಂದರೆ, ಕಿರುಕುಳದ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಗ್ರೇಟರ್ ನೊಯಿಡಾದಲ್ಲಿ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ನಂತರ ಆಕೆಗೆ ಬೆಂಕಿ ಹಚ್ಚಿಕೊಂದಿರುವ ಘಟನೆ ಮನಕಲಕುವಂತಾಗಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಹೆಣ್ಣು ಮಕ್ಕಳು, ವಿಶೇಷವಾಗಿ ಶಾಲಾ ವಿದ್ಯಾರ್ಥಿನಿಯರು ಮನೆಯಿಂದ ಹೊರ ಬರಲಿಕ್ಕೆ ಹಿಂಜರಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೊಂಚು ಹಾಕುವ ದುಷ್ಕರ್ಮಿಗಳು, ಬಾಲಕಿಯರ ಮೇಲೆ ದೌರ್ಜನ್ಯವೆಸಗಲೆತ್ನಿಸುತ್ತಾರೆ.

ಕಳೆದ ಬುಧವಾರ ದಕ್ಷಿಣ ದೆಹಲಿಯ ಜನನಿಬಿಡ ಆಫ್ರಿಕಾ ಅವೆನ್ಯೂ ರಸ್ತೆಯಲ್ಲಿನ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆದು, ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮೂವರು ವಿದ್ಯಾರ್ಥಿನಿಯರು ಹೊರ ಬಂದಿದ್ದರು. ಅದೇ ಸಮಯದಲ್ಲಿ 14 ವರ್ಷದ ಅನಿತಾ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದರು.

ಪಾದಚಾರಿ ರಸ್ತೆಯಲ್ಲಿ ಹೊಂಚು ಹಾಕುತ್ತಿದ್ದ ಮೂವರು ವ್ಯಕ್ತಿಗಳು, ಆಕೆಯನ್ನು ಬಲತ್ಕಾರವಾಗಿ ವ್ಯಾನ್‌ನೊಳಕ್ಕೆ ಎಳೆದೊಯ್ದರು. ಆಕೆ ಹೇಗೋ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದಳು.

ಮೂವರಲ್ಲಿ ಮತ್ತೊಬ್ಬ ವ್ಯಕ್ತಿ, 10 ವರ್ಷದ ಸೀಮಾ ಎಂಬಾಕೆಯನ್ನು ದುಪ್ಪಟ ಹಿಡಿದೆಳೆದು ಬಾಯಿ ಮುಚ್ಚಿದ. ಅಂತಹ ಸ್ಥಿತಿಯಲ್ಲೂ ಆಕೆ ಹೇಗೋ ತಪ್ಪಿಸಿಕೊಂಡಳು. ನನ್ನ ಚೀರಾಟ ಕೇಳಿದ ಸಾರ್ವಜನಿಕರು, ಆ ವ್ಯಕ್ತಿಯೊಂದಿಗೆ ಸಂಘರ್ಷಕ್ಕಿಳಿದು, ಬೆದರಿಸಿದರು. ನಾನು ಮನೆಗೆ ಓಡಿದೆ ಎಂದು ಸೀಮಾ ಹೇಳಿದ್ದಾರೆ.

ಇಂತಹ ಘಟನೆಗಳ ಬಗ್ಗೆ ಬಾಲಕಿಯರು ಮನೆಗಳಲ್ಲಿನ ಪೋಷಕರಿಗೆ ಹೇಳಲು ಸಾಧ್ಯವಾಗುವುದಿಲ್ಲ. ದೆಹಲಿ ನಗರ ವ್ಯಾಪ್ತಿಯಲ್ಲಿನ ಗ್ರಾಮಗಳ ಪೈಕಿ ಒಂದಾದ ಮೊಹಮ್ಮದ್‌ಪುರದಲ್ಲಿ ನೆಲೆಸಿರುವ ಕುಟುಂಬಗಳ ಮಕ್ಕಳು ಶಾಲೆಯಿಂದ ತಮ್ಮ ಮನೆಗೆ ತೆರಳಲು 20 ನಿಮಿಷ ಬೇಕಾಗುತ್ತದೆ. ಇಲ್ಲಿ ನೆಲೆಸಿರುವ ಜನರು ಬಹುತೇಕ ಕಾರ್ಮಿಕರು ಇಲ್ಲವೆ ಮನೆಕೆಲಸದಾಳುಗಳಾಗಿದ್ದಾರೆ.

`ಶಾಲೆಗೆ ಹೋಗುವ ನಮ್ಮ ಮಕ್ಕಳ ಜತೆಗೆ ಹೋಗಿ ಬರಲಿಕ್ಕೆ ನಮಗೆ ಸಮಯ ಇಲ್ಲ’ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಹಿಂಸಾಚಾರಕ್ಕೊಳಗಾದ ಮಕ್ಕಳು ಭಯಭೀತರಾಗಿರುತ್ತಾರೆ. ಆದರೂ ಸೀಮಾ ಹೇಳುತ್ತಾಳೆ. `ರಜೆ ದಿನಗಳು ಮುಗಿದ ನಂತರ ಶಾಲೆಗೆ ಹೋಗುತ್ತೇನೆ’.

ಶಿಕ್ಷಣ ತಜ್ಞರಾದ ವಂದನಾದತ್ ಆನಂದ್, ಬಾಲಕಿಯರು ಇಂತಹ ಘಟನೆಗಳು ನಡೆದಾಗ ಪೋಷಕರಿಗೆ ತಿಳಿಸುವಂತೆ ಜಾಗೃತಿ ಮೂಡಿಸಬೇಕು. ದುಷ್ಕರ್ಮಿಗಳ ವಿರುದ್ಧ ಪ್ರತಿಭಟಿಸುವಂತಹ ಧೈರ್ಯ ತುಂಬಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ಮಾತ್ರ ಇಂತಹ ಘಟನೆಗಳು, ನಡೆದಿಲ್ಲ. ದೇಶದ ಇತರ ಕಡೆಗಳಲ್ಲೂ ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿರುವ ಬಗ್ಗೆ ವರದಿಗಳಿವೆ. ಆದರೆ, ಒಂದೊಂದು ಘಟನೆಯೂ ಭಿನ್ನವಾಗಿದ್ದು, ಎಳೆಯ ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ಖಂಡಿತ.

Write A Comment