ಅಂತರಾಷ್ಟ್ರೀಯ

ಬರಲಿದೆ ಪೇಪರ್ ಫೋಲ್ಡ್ ಸ್ಮಾರ್ಟ್‌ಫೋನ್ !

Pinterest LinkedIn Tumblr

PaperFold-3

ದೈನಂದಿನ ಆಡಳಿತದಲ್ಲಿ ಕಾಗದದ ಪರಿಕಲ್ಪನೆ ಅದ್ಭುತವಾದುದು. ದಿನ ನಿತ್ಯದ ಜೀವನದಲ್ಲಿ ಕಾಗದದ ಬಳಕೆ ಹಾಸುಹೊಕ್ಕಾಗಿತ್ತು. ಕಾಗದ ಇಲ್ಲದೆ ಜೀವನ ಇಲ್ಲ ಎನ್ನುವ ರೀತಿ ಕಾಗದದ ಬಳಕೆಯಾಗುತ್ತಿತ್ತು. 2-3 ಶತಮಾನಗಳಿಗೂ ಹೆಚ್ಚು ಕಾಲ ರಾಜನಂತೆ ಜಾಗತಿಕ ಜಗತ್ತನ್ನು ಆಳಿದ ಕಾಗದ ಎಲೆಕ್ಟ್ರಾನಿಕ್ ಯುಗ ಆರಂಭವಾಗುತ್ತಿದ್ದಂತೆ ಮೂಲೆ ಸೇರುವ ಪರಿಸ್ಥಿತಿ ನಿರ್ಮಾಣವಾಯಿತು.

ಈಗೇನಿದ್ದರೂ ಡಿಜಿಟಲ್ ತಂತ್ರಜ್ಞಾನ, ಕಾಗದದ ಬಳಕೆ ಅಷ್ಟಾಗಿ ಇಲ್ಲ. ತಂತ್ರಜ್ಞಾನ ಮುಂದುವರೆದಂತೆ ಮೊಬೈಲ್‌ಗಳಲ್ಲಿ ಆವಿಷ್ಕಾರ ನಡೆದವು. ಇದೀಗ ಹೊಸ ಮಾದರಿಯ ಫೋಲ್ಡೆಬಲ್ ಸ್ಮಾರ್ಟ್‌ಫೋನ್ (ಮಡಚಬಹುದಾದ ಫೋನುಗಳು) ತಯಾರಾಗುತ್ತಿವೆ. ಅಂದರೆ ಈ ಸ್ಮಾರ್ಟ್‌ಫೋನ್‌ಗಳನ್ನು ಪೇಪರ್‌ನಂತೆ ಮಡಿಚಿಟ್ಟುಕೊಳ್ಳಬಹುದು.

ಕೆನಡಾದ ಕ್ವೀನ್ಸ್ ವಿಶ್ವವಿದ್ಯಾನಿಲಯ ಹ್ಯೂಮನ್ ಮೀಡಿಯಾ ಲ್ಯಾಬ್ಡ್ (ಮಲ್ಟಿ ಡಿಸ್‌ಪ್ಲೇ ಚೇಂಜಿಂಗ್ ಸ್ಮಾರ್ಟ್‌ಫೋನ್) ಅನ್ನು ಬಿಡುಗಡೆ ಮಾಡಿದೆ. ಇದೊಂದು ಅಚ್ಚರಿಯ ಸಂಗತಿ ಎಂದು ಫೋನ್ ನೋಡಿದವರು ಉದ್ಗಾರ ತೆಗೆದಿದ್ದಾರೆ.

ಈ ಪೇಪರ್ ಫೋಲ್ಡ್ ಮೊಬೈಲ್ ಫೋನ್‌ನ್ನು ಮೂರು ಪದರಗಳಾಗಿ ತೆಗೆದು ನೋಡಬಹುದು. ಬಳಕೆದಾರರು ಇ-ಲಿಂಕ್ ‌ಡಿಸ್ಪ್ಲೇಯುಳ್ಳ ಶೀಟ್‌ಗಳನ್ನು ಬಳಸಿ ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ.

ವಿಶೇಷವೆಂದರೆ, ಪತ್ರಿಕೆಗಳಲ್ಲಿ ಪುಟಗಳನ್ನು ತಿರುವಿ ಹಾಕಿದಂತೆ ಈ ಫೋನ್‌ನಲ್ಲಿ ಕೂಡ ಹೆಚ್ಚುವರಿ ಪರದೆಗಳನ್ನು ಪಡೆಯಬಹುದು.

ಗ್ರಾಹಕರು ಮೊಬೈಲ್ ಪರದೆ ಮೇಲೆ ಯಾವುದೇ ಮಾಹಿತಿ ತೆರೆದರೂ ಈ ಪೇಪರ್ ಫೋಲ್ಡ್ ಸ್ಮಾರ್ಟ್‌ಫೋನ್ ಸ್ವಯಂಚಾಲಿತ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಎಲ್ಲಿ ಮಾಹಿತಿಗಳನ್ನು ಮೂರು ಪದರಗಳಿಗೂ ವಿಸ್ತರಿಸುತ್ತದೆ.

ಕೆಲವು ಸಂದರ್ಭಗಳಲ್ಲಿ ಎರಡು ಪದರಗಳನ್ನು ಮಡಿಚಿ ಚಿಕ್ಕ ಲ್ಯಾಪ್‌ಟಾಪ್ ಆಕೃತಿಯನ್ನು ಹೊಂದುತ್ತದೆ. ಇನ್ನುಳಿದ ಒಂದು ಪದರ ಟಚ್‌ಸ್ಕ್ರೀನ್ ಕೀಬೋರ್ಡ್ ಆಗಿ ಬದಲಾಗುತ್ತದೆ ಎನ್ನುತ್ತಾರೆ ಕೆನಡಾ ವಿ.ವಿ.ಯ ಹ್ಯೂಮನ್ ಮಿಡಿಯಾ ಲ್ಯಾಬ್‌ನ ವಿಜ್ಞಾನಿಗಳು.

ಇನ್ನೂ ಬಳಕೆದಾರರು ಗೂಗಲ್ ನಕ್ಷೆಯನ್ನು ಬಳಸಿಕೊಂಡು ವಿಳಾಸ ಹುಡುಕುತ್ತಿದ್ದಂತೆ ಪೇಪರ್ ಫೋಲ್ಡ್ ಸ್ಮಾರ್ಟ್‌ಫೋನ್ ತನ್ನ ಮೂರು ಪರದೆಯಲ್ಲೂ ವಿಳಾಸದ ಬಗೆಗಿನ ನಕ್ಷೆಯನ್ನು ತೋರಿಸುತ್ತದೆ.

ಇಷ್ಟೆ ಅಲ್ಲದೆ ಎಲ್ಲ ಕಟ್ಟಡಗಳ 3-ಡಿ ಚಿತ್ರಣವನ್ನು ಪೇಪರ್ ಫೋಲ್ಡ್ ಒದಗಿಸುತ್ತದೆ. ಬಳಕೆದಾರರು ಸ್ಕ್ರೀನ್ ಅನ್ನು ಗ್ಲೋಬ್ ಆಕಾರದಲ್ಲಿ ಬಾಗಿಸಿ ಗೂಗಲ್ ಅರ್ಥ್ ಕೂಡ ನೋಡಬಹುದು. ಇನ್ನು ಆರಂಭವಾಗಲಿದೆ ಪೇಪರ್ ಫೋಲ್ಡ್ ಸ್ಮಾರ್ಟ್‌ಫೋನ್ ಯುಗ.

Write A Comment