ರಾಷ್ಟ್ರೀಯ

ಕೇರಳದಲ್ಲಿ ರೆಕ್ಕೆ ಬಿಚ್ಚಿದ ಜಟಾಯು !

Pinterest LinkedIn Tumblr

Kerala

ರಾಮಾಯಣದಲ್ಲಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುವಾಗ ಆತನನ್ನು ಅಡ್ಡಗಟ್ಟಿ ಸೀತೆಯನ್ನು ರಕ್ಷಿಸಲು ಹೋರಾಡಿದ ಜಟಾಯು ಕತೆ ಎಲ್ಲರಿಗೂ ತಿಳಿದಿದೇ. ಹಾಗೆ ರಾವಣನ ಜೊತೆ ಯುದ್ಧ ಮಾಡಿ ರೆಕ್ಕೆ ಮುರಿದುಕೊಂಡ ಜಟಾಯು ಬಿದ್ದದ್ದು ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲದಲ್ಲಿ ಎಂಬ ಇತಿಹಾಸವಿದೆ.

ಜಟಾಯು ಬಂದು ಬಿದ್ದ ಆ ಬಂಡೆಯನ್ನು ಜಟಾಯು ಬಂಡೆ ಎಂದೇ ಕರೆಯಲಾಗುತ್ತಿದೆ. ಜಟಾಯು ನೇಚರ್ ಪಾರ್ಕ್ ಎಂಬ ಹೆಸರಿನಲ್ಲಿ ಚಡಯ ಮಂಗಲದಲ್ಲಿ ಹೊಸತೊಂದು ಪಾರ್ಕ್ 2016ರ ಜನವರಿಯಲ್ಲಿ ಪ್ರಾರಂಭವಾಗಿದೆ. ಸಿನಿಮಾ ನಿರ್ದೇಶಕ ರಾಜೀವ್ ಅಂಚಲ್ ಅವರ ಆಶಯದೊಂದಿಗೆ ಸಜ್ಜಾಗಿರುವ ಈ ಪಾರ್ಕ್ ಕೇರಳ ಪ್ರವಾಸೋದ್ಯಮದಲ್ಲಿ ಮಹತ್ತರ ಪಾತ್ರ ವಹಿಸಲಿದೆ .

ಕಲೆ ಮತ್ತು ಇತಿಹಾಸವನ್ನು ಸಮ್ಮಿಶ್ರವಾಗಿರಿಸಿದ ಈ ಪಾರ್ಕ್‌ನಲ್ಲಿರುವ ಜಟಾಯು ಪ್ರತಿಮೆ ಜಗತ್ತಿನ ಅತೀ ದೊಡ್ಡ ಜಟಾಯು ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ೬೫ ಎಕರೆ ಸ್ಥಳದಲ್ಲಿ ರೆಕ್ಕೆ ಬಿಚ್ಚಿರುವ ಜಟಾಯು ಪ್ರತಿಮೆ ೧೫೦ ಅಡಿ ಅಗಲವೂ ೭೦ ಅಡಿ ಎತ್ತರವೂ ಇದೆ. ನೆಲ ಭಾಗದಿಂದ ೧೦೦ ಅಡಿ ಎತ್ತರದಲ್ಲಿ ೧೫,೦೦೦ ಚದರ ಅಡಿಯಲ್ಲಿ ಈ ನೇಚರ್ ಪಾರ್ಕ್ ಸಿದ್ಧಗೊಂಡಿದೆ.

೩೬೦ ಡಿಗ್ರಿ ಸುತ್ತಳತೆಯಲ್ಲಿ ನಿರ್ಮಾಣಗೊಂಡಿರುವ ಈ ಪಾರ್ಕ್ ನೋಡುಗರ ಉಬೇರುವಂತೆ ಮಾಡುತ್ತದೆ. ಅಲ್ಲದೆ ಈ ಪಾರ್ಕ್‌ನಲ್ಲಿ ಆರ್ಯುವೇದಿಕ್ ಔಷಧಿಯ ಗಿಡಮೂಲಿಕೆಗಳು ದೊರೆಯಲಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಇದರಿಂದಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಪಾರ್ಕ್ ಅಭಿವೃದಿಗೆ ಗಮನಹರಿಸಿದೆ, ಇಲ್ಲಿ ಆಯುರ್ವೇದ ಗುಹೆ ರೆಸಾರ್ಟ್, ೬ಡಿ ರಂಗವೇದಿಕೆ, ಬಿಲ್ಲುಗಾರಿಕೆ, ಲೇಸರ್ ಟ್ಯಾಗ್, ಬಂದೂಕು ಚಟುವಟಿಕೆಗಳನ್ನು ಒಂದು ಸಾಹಸ ವಲಯವಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ರಾಕ್ ಕ್ಲೈಂಬಿಂಗ್, ಮತ್ತು ರ್‍ಯಾಪ್‌ಲಿಂಗ್ಸೇರಿದಂತೆ ಅನೇಕರು ಇಡೀ ಸ್ಥಳಕ್ಕೆ ಒಂದು ಸೂಕ್ತ ಪಕ್ಷಿನೋಟವನ್ನು ನೀಡಲು ಮುಂದಾಗಿದ್ದಾರೆ. ಅಲ್ಲದೆ ಒಂದು ಕೇಬಲ್ ಕಾರು ವ್ಯವಸ್ಥೆ ಸಹ ನಿರ್ಮಿಸಲು ಯೋಜಿಸಲಾಗಿದೆ.

ಇದಲ್ಲದೆ ಪ್ರವಾಸಿಗರ ಆಕರ್ಷಣೆಯ ಬದಲಾಗಿ ಪಾರ್ಕ್‌ನಲ್ಲಿ ನವೀಕರಿಸಬಹುದಾದ ಶಕ್ತಿ ಮತ್ತು ಮಳೆನೀರು ಕೊಯ್ಲು ಯೋಜನೆಗಳನ್ನು ರೂಪಿಸಿ ಪ್ರಮುಖವಾಗಿ ಅಲ್ಲಿನ ಸ್ಥಳೀಯ ಸಮುದಾಯಗಳಿಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

Write A Comment