ರಾಷ್ಟ್ರೀಯ

ಸರ್ಕಾರದ ಜಾಹಿರಾತುಗಳಲ್ಲಿ ಸಿಎಂ, ಸಚಿವರು, ರಾಜ್ಯಪಾಲರ ಭಾವಚಿತ್ರಕ್ಕೆ ಸುಪ್ರೀಂ ಅಸ್ತು

Pinterest LinkedIn Tumblr

suprimನವದೆಹಲಿ, ಮಾ.18- ಸರ್ಕಾರದ ಜಾಹಿರಾತುಗಳಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ರಾಜ್ಯ ಸಚಿವರುಗಳು ಭಾವಚಿತ್ರ ಪ್ರಕಟಿಸುವುದಕ್ಕೆ ಸರ್ವೋಚ್ಛ ನ್ಯಾಯಾಲಯ ಇಂದು ಅವಕಾಶ ಕಲ್ಪಿಸಿ ನಿರ್ದೇಶನ ನೀಡಿದೆ.

ಯಾವುದೇ ಸರ್ಕಾರದ ಜಾಹಿರಾತುಗಳಲ್ಲಿ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಹೊರತಾಗಿ ಯಾರ ಭಾವಚಿತ್ರಗಳನ್ನು ಪ್ರಕಟಿಸಬಾರದು ಎಂದು ಈ ಮೊದಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ ನ್ಯಾಯಾಲಯ ದ ಈ ಆದೇಶದ ವಿರುದ್ದ ರಾಜ್ಯಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ರಾಜ್ಯಗಳ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್ ಇಂದು ಈ ಆದೇಶ ನೀಡಿದೆ.

ಇನ್ನು ಸರ್ಕಾರದ ಜಾಹಿರಾತುಗಳಲ್ಲಿ ಮುಖ್ಯಮಂತ್ರಿಗಳು, ಸಂಪುಟ ಸಚಿವರು, ಕೇಂದ್ರ ಸಚಿವರು, ರಾಜ್ಯಪಾಲರ ಭಾವಚಿತ್ರಗಳನ್ನು ಪ್ರಕಟಿಸಬಹುದಾಗಿದೆ.

Write A Comment