
ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವುದಿಲ್ಲ ಎಂಬ ಹೇಳಿಕೆ ಭಾರಿ ಕಿಡಿ ಹೊತ್ತಿಸಿದ್ದು, ಉತ್ತರ ಪ್ರದೇಶದ ಬಿಜೆಪಿ ನಾಯಕ ಶ್ಯಾಮ್ ಪ್ರಕಾಶ್ ದ್ವಿವೇದಿ, ಓವೈಸಿ ನಾಲಿಗೆ ಕತ್ತರಿಸಿದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಹೇಳಿದ್ದಾರೆ.
‘ನನಗೆ ತಿಳಿದಂತೆ ಆತ ಈ ದೇಶದ್ರೋಹಿ. ಭಾರತದಲ್ಲಿ ವಾಸವಿದ್ದು, ಭಾರತ್ ಮಾತಾ ಕೀ ಜೈ ಅನ್ನಲು ಆತನಿಗೆ ಕಷ್ಟವೆನಿಸಿದರೆ, ಆತನಿಗೆ ಭಾರತದಲ್ಲಿ ನೆಲೆಸಲು ಯಾವುದೇ ಅಧಿಕಾರವಿಲ್ಲ. ಆತನ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ೧ ಕೋಟಿ ರೂ. ಬಹುಮಾನ ನೀಡುವುದಾಗಿ’ ಹೇಳಿದ್ದಾರೆ.
ಓವೈಸಿ ಭಾರತ್ ಮಾತಾ ಕೀ ಜೈ ಎಂದು ಹೇಳುವುದಿಲ್ಲ ಎನ್ನುವ ಮೂಲಕ ದೇಶವನ್ನು ಅಪಮಾನಿಸಿದ್ದಾರೆ ಎಂದು ಹೈದರಾಬಾದ್ ಸಂಸದ ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಲಹೆಯನ್ನು ಅಲ್ಲಗಳೆಯುವ ತರಾತುರಿಯಲ್ಲಿ ಓವೈಸಿ, ಕುತ್ತಿಗೆ ಬಳಿ ಚೂರಿ ಇಟ್ಟು ಕೇಳಿದರು ನಾನು ಭಾರತ್ ಮಾತಾ ಕೀ ಜೈ ಅನ್ನುವುದಿಲ್ಲ. ಹೀಗೆಂದು ಹೇಳುವಂತೆ ಸಂವಿಧಾನ ತಿಳಿಸಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆ ತೀವ್ರ ವಿವಾದ ಸೃಷ್ಠಿಸಿದೆ.