ರಾಷ್ಟ್ರೀಯ

ಪರೀಕ್ಷೆಯ ವೇಳೆ ಕಾಪಿ ಮಾಡಲು ಕಾಚ ಬಳಕೆ

Pinterest LinkedIn Tumblr

hyderabad-cheating-e1458198452335ಎಲ್ಲರೂ ಪರೀಕ್ಷೆಯ ವೇಳೆ ಚೀಟಿಯಿಟ್ಟು ನಕಲು ಮಾಡಲು ಹೋಗಿ ಸಿಕ್ಕಿ ಬೀಳುವುದು ಕಾಮನ್, ಅದರೆ ಹೈದರಾಬಾದ್ ಕಾಲೇಜೊಂದರ ವಿದ್ಯಾರ್ಥಿ ಚೀಟಿ ಗೋಜಿಗೆ ಹೋಗದೆ ನೇರವಾಗಿ ಒಳ ಉಡುಪಿನಲ್ಲಿ ಮೊಬೈಲ್ ಫೋನ್ ಬಳಸಿ ನಕಲು ಮಾಡಿ ಸಿಕ್ಕಿಬಿದ್ದಿದ್ದಾನೆ.

ಹೈದರಾಬಾದ್ ನಲ್ಲಿ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿ ಯು ಪರೀಕ್ಷೆ ಬರೆಯುತ್ತಿದ್ದ ಶೇಕ್ ಅಝೀಝ್ ಮತ್ತು ಆತನ ಮಿತ್ರ ಶಮಿವುಲ್ಲ ಇಬ್ಬರು ಪರೀಕ್ಷೆಯಲ್ಲಿ ನಕಲು ಮಾಡಲು ಹೋಗಿ ಪೊಲೀಸರ ಅಥಿತಿಯಾಗಿದ್ದಾರೆ.

ಖಾಸಗೀ ಕಾಲೇಜೊಂದರಲ್ಲಿ ದ್ವಿತೀಯ ಪಿ ಯು ಓದುತ್ತಿದ್ದ ಅಝೀಝ್ ಸಂಜೆಯ ವೇಳೆ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಲಿಕೆಯಲ್ಲಿ ಕಡಿಮೆ ಆಸಕ್ತಿಹೊಂದಿರುವ ಈತ ಹೇಗಾದರೂ ಮಾಡಿ ಪರೀಕ್ಷೆ ಪಾಸ್ ಮಾಡಬೇಕೆಂದು ತನ್ನ ಗೆಳೆಯನ ಸಹಾಯದೊಂದಿಗೆ ಆನ್ ಲೈನ್ ನಲ್ಲಿ ಮೈಕ್ರೋ ಫೋನ್ ಖರೀದಿಸಿದ್ದರು.

ಮಾರ್ಚ್ 9 ರಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಅಝೀಝ್ ತನ್ನ ಒಳ ಚಡ್ಡಿಯಲ್ಲಿ ಮೊಬೈಲನ್ನು ಇಟ್ಟುಕೊಂಡು ಬ್ಲೂಟೂತ್ ಮೈಕ್ರೋ ಫೋನ್ ಸಹಾಯದಿಂದ ಪ್ರಶ್ನೆಗಳನ್ನು ಸಮೀ ಉಲ್ಲಾ ಬಳಿ ಕೇಳಿ ಉತ್ತರ ಬರೆಯುತ್ತಿದ್ದ.

ಇದೇ ರೀತಿ ಮಾ.10ರಂದು ನಡೆದ ಪರೀಕ್ಷೆಯಲ್ಲೂ ಯಾರಿಗೂ ತಿಳಿಯದಂತೆ ನಕಲು ಮಾಡಿ ಪರೀಕ್ಷೆ ಬರೆದಿದ್ದ. ಆದರೆ ಇವರಿಬ್ಬರ ದುರಾದೃಷ್ಟವೋ ಅಥವಾ ವಿಧಿ ನಿಯಮವೋ ಏನೋ ಮಾ.12ರಂದು ನಡೆದಿದ್ದ ಪರೀಕ್ಷೆಗೆ ತಡವಾಗಿ ಹಾಜರಾದ ಅಝೀಝ್ ನನ್ನು ಕಂಡು ಪರೀಕ್ಷಾಧಿಕಾರಿ ಅನುಮಾನದಿಂದ ಪರಿಶೀಲಿಸಿದಾಗ ಇಬ್ಬರ ಬಂಡವಾಳವೂ ಹೊರ ಬಿದ್ದಿದೆ.

ವಿಷಯ ತಿಳಿದ ಕಾಲೇಜಿನ ಆಡಳಿತ ಮಂಡಳಿ ಕೂಡಲೇ ಇಬ್ಬರನ್ನೂ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ, ತನಿಖೆಯ ವೇಳೆ ಇಬ್ಬರೂ ತಮ್ಮ ಕೈಚಳಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಚೀಟಿ ಬರೆದು ಸಿಕ್ಕಿ ಬೀಳುತ್ತಿದ್ದರೆ ಇವರು ಒಂದು ಹೆಜ್ಜೆ ಮುಂದುವರೆದು ಮೊಬೈಲ್ ಬಳಸಿ ಪೊಲೀಸರ ಅಥಿತಿಯಾಗಿದ್ದಾರೆ

Write A Comment